ನವಲಗುಂದ : ತಾಲೂಕಿನ ಹಾಲಕುಸುಗಲ್ಲ ಗ್ರಾಮದಲ್ಲಿ ಶುಕ್ರವಾರ ನಾಗರಪಂಚಮಿ ಹಾಗೂ ಶ್ರೀ ಸಿದ್ಧಾರೂಢಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಅದ್ಭುತ ಶಕ್ತಿ ಪ್ರದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಇನ್ನು ಕುಮಾರ ಭರತ ಮತ್ತು ಸೋಮಪ್ಪ ಭದ್ರಣ್ಣವರ ಪೈಲ್ವಾನರು ಶಕ್ತಿ ಪ್ರದರ್ಶನದಲ್ಲಿ ಭಾಜಿಯಾಗಿದ್ದು, ನೆಲದ ಮೇಲೆ, ಮರಗಾಲು ಕಟ್ಟಿಕೊಂಡು, ಹಿಂಬದಿಯಿಂದ ಬಾಗಿ ಮುಂದೆ ಒಗೆಯುವುದು, ಮೊಣಕೈಯಿಂದ ಮಾಡುವ, ಉಸುಕಿನ ಹಂಡೆಯನ್ನು ವಿತ್ತುವ, ನೇಗಿಲ ಹೊರುವ, ಚೀಲ ಹೊರುವಂತಹ ಶಕ್ತಿ ಪ್ರದರ್ಶನಕ್ಕೆ ಜನರು ಕೇಕೆ, ಸಿಳ್ಳೆ ಹೊಡೆದು ಸ್ಪರ್ಧೆಗೆ ಹುರಿದುಂಬಿಸಿ, ಖುಷಿ ಪಟ್ಟರು.
Kshetra Samachara
14/08/2021 11:11 am