ಹುಬ್ಬಳ್ಳಿ: ಫಸ್ಟ್ ಕ್ರಿಕೆಟ್ ಅಕಾಡೆಮಿಯಿಂದ ಆಯೋಜಿಸಲಾಗಿರುವ ಸ್ಕೈ 360 ಸೊಲ್ಯೂಷನ್ ಅಂಡರ್ 14 ಕ್ರಿಕೆಟ್ ಟೂರ್ನಮೆಂಟ್ ಉದ್ಘಾಟನಾ ಕಾರ್ಯಕ್ರಮವನ್ನು ಹುಬ್ಬಳ್ಳಿಯ ಜಿಮಖಾನ್ ಮೈದಾನದಲ್ಲಿ ಹಮ್ಮಿಕೊಳ್ಳಲಾಯಿತು.
ಕೆಎಸ್‌ಸಿಎ ಧಾರವಾಡ ವಲಯದ ಮಾಜಿ ಕನ್ವೇನರ್ ಬಾಬಾ ಬೂಸದ, ಕ್ಯಾಪ್ಟನ್ ಅರುಣಕುಮಾರ್ ಸನಸೋಲಾರ, ಸಂಸ್ಥೆಯ ಮಾಲೀಕರಾದ ಮಹೇಶ್ ಹೊಲಗಣ್ಣವರ, ಮಹೇಶ್ ಮಲಹೋತ್ರ, ಫಸ್ಟ್ ಕ್ರಿಕೆಟ್ ಅಕಾಡೆಮಿ ಅಧ್ಯಕ್ಷ ಸಂದೀಪ್ ಪೈ ಹಾಗೂ ರಾಹುಲ್ ವರ್ಣೇಕರ ನೇತೃತ್ವದಲ್ಲಿ ಟೂರ್ನಿಯನ್ನು ಉದ್ಘಾಟನೆ ಮಾಡಲಾಯಿತು.
ಟೂರ್ನಮೆಂಟ್ ಮೊದಲ ಪಂದ್ಯದಲ್ಲಿ ದುರ್ಗಾ ಸ್ಪೋರ್ಟ್ಸ್ ಅಕಾಡೆಮಿ ಹಾಗೂ ಹುಬ್ಬಳ್ಳಿ ಕ್ರಿಕೆಟ್ ಅಕಾಡೆಮಿ ಮುಖಾಮುಖಿಯಾಗಿದ್ದವು. ಟಾಸ್ ಗೆದ್ದ ದುರ್ಗಾ ಸ್ಪೋರ್ಟ್ಸ್ ಅಕಾಡೆಮಿ ಬೌಲಿಂಗ್ ಆಯ್ಕೆ ಮಾಡಿಕೊಂಡು ಸೆಣಸಾಟಕ್ಕೆ ಮುಂದಾಯಿತು.
ಮೊದಲ ಬ್ಯಾಟಿಂಗ್ ಪ್ರಾರಂಭಿಸಿದ ಹುಬ್ಬಳ್ಳಿ ಕ್ರಿಕೆಟ್ ಅಕಾಡೆಮಿ 30 ಓವರ್‌ಗಳಲ್ಲಿ 112 ರನ್ ಹೊಡೆಯುವ ಮೂಲಕ 8 ವಿಕೆಟ್ ಕಳೆದುಕೊಂಡಿತು.ಆದಿತ್ಯ ಉಮರಾಣಿ 76 ಎಸೆತಗಳಲ್ಲಿ 47 ರನ್, ಅನಮೋಲ್ ಪಿ.40 ಎಸೆತಗಳಲ್ಲಿ 28 ರನ್ ಕಲೆ ಹಾಕಿದ್ದಾರೆ. ಇನ್ನೂ ಅದಿತ್ಯ ಖಿಲಾರೇ 3 ವಿಕೆಟ್ ಪಡೆದಿದ್ದು, ಭೂಮಿಕಾ 2 ವಿಕೆಟ್ ಪಡೆದುಕೊಂಡರು. ಬಳಿಕ ಬ್ಯಾಟಿಂಗ್ ಪ್ರಾರಂಭಿಸಿದ ದುರ್ಗಾ ಸ್ಪೋರ್ಟ್ಸ್ ಅಕಾಡೆಮಿಯು ಹುಬ್ಬಳ್ಳಿ ಕ್ರಿಕೆಟ್ ಅಕಾಡೆಮಿ ವಿರುದ್ಧದ ಸೆಣಸಾಟದಲ್ಲಿ ಮೂರು ವಿಕೆಟ್‌ಗಳ ಜಯವನ್ನು ಸಾಧಿಸಿದೆ.
ಮಹೇಂದ್ರ ಹಬೀಬ್ 70 ಎಸೆತಗಳಲ್ಲಿ 37 ರನ್ ಬಾರಿಸಿದರೇ ಅನೀಶ್ 46 ಎಸೆತಗಳಲ್ಲಿ 31 ರನ್ ಕಲೆಹಾಕಿದರು.ಇನ್ನೂ ಜೋಸೂವ್ 2 ವಿಕೆಟ್ ಹಾಗೂ ಲಿತೀಕ್ ಕೂಡ ಎರಡು ವಿಕೆಟ್ ಪಡೆದಿದ್ದು, ದುರ್ಗಾ ಸ್ಪೋರ್ಟ್ಸ್ ಅಕಾಡೆಮಿ ಟೂರ್ನಮೆಂಟ್ ಮೊದಲ ಪಂದ್ಯದಲ್ಲಿ ವಿಜಯ ಪತಾಕೆ ಹಾರಿಸಿತು. ಅತ್ಯುತ್ತಮ ಮೂರು ವಿಕೆಟ್ ಪಡೆದ ಆದಿತ್ಯ ಖಿಲಾರೆ ಅವರಿಗೆ ಮ್ಯಾನ ಆಫ್ ದಿ ಮ್ಯಾಚ್ ವಿತರಣೆ ಮಾಡಲಾಯಿತು.
Kshetra Samachara
13/12/2020 04:29 pm