ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ಸ್ಟಾರ್ಟ್ ಅಪ್ ಕಂಪನಿ ಸಾಧನೆ : ಹುಳು ಪತ್ತೆ ಸಾಧನ ಅನಾವರಣ

ಹುಬ್ಬಳ್ಳಿ : ರೈತರ ಜಾಗೃತಿಗಾಗಿ ವಿಶೇಷ ಕಾರ್ಯಕ್ರಮ ಆಯೋಜಿಸುವ ಮೂಲಕ ಹುಬ್ಬಳ್ಳಿಯ ಸ್ಟಾರ್ಟ್ ಅಪ್ ಕಂಪನಿಯಾದ ವೈಡ್ ಮೊಬಿಲಿಟಿ ಮೆಕಾಟ್ರಾನಿಕ್ಸ್ ಪ್ರೈ. ಲಿಮಿಟೆಡ್ ಹೊಸ ಯಂತ್ರವೊಂದನ್ನು ಆವಿಷ್ಕರಿಸಿ ಅನಾವರಣಗೊಳಿಸಿದೆ.

ಹೌದು ಭಾರತ ಸರ್ಕಾರದ ಜೊತೆಗೆ ಕರ್ನಾಟಕ ಸರ್ಕಾರ ಹಾಗೂ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಸಹಕಾರದೊಂದಿಗೆ ಹುಬ್ಬಳ್ಳಿಯ ಸ್ಟಾರ್ಟ್ ಅಪ್ ಕಂಪನಿಯಾದ ವೈಡ್ ಮೊಬಿಲಿಟಿ ಮೆಕಾಟ್ರಾನಿಕ್ಸ್ ಪ್ರೈ. ಲಿ (WIDE MOBILITY MECHATRONICS PVT LTD ) ವಿಶ್ವದಲ್ಲಿಯೇ ಮೊದಲ ಬಾರಿಗೆ ಗರಕಿನ್ (ಒಂದು ತರಹದ ಸೌತೆಕಾಯಿ) ಒಳಗಡೆ ಏನಾದರೂ ಹುಳುಕು ಇದ್ದಲ್ಲಿ ಅದನ್ನು ಕಂಡು ಹಿಡಿಯುವ CONRAG-G, Gherkin inspection system ಎಂಬ ಈ ಯಂತ್ರ ಅಭಿವೃದ್ಧಿಪಡಿಸಿ ಅನಾವರಣಗೊಳಿಸಿದೆ.

ಇನ್ನು ಈ ಯಂತ್ರವನ್ನು ರೈತರಿಗೆ ಪರಿಚಯಿಸಿದ ಕಂಪನಿ ವಿವಿಧ ಹಂತಗಳಲ್ಲಿ ಸರ್ಕಾರ ರೈತರಿಗೆ ಹೇಗೆ ಪೂರಕವಾಗಿದೆ ಎನ್ನುವುದನ್ನು ತಿಳಿಸಿಕೊಟ್ಟಿದೆ.

ಇನ್ನು ದೇಶಪಾಂಡೆ ಫೌಂಡೇಶನ್ ಹಾಗೂ ವೈಡ್ ಮೊಬಿಲಿಟಿ ಮೆಕಾಟ್ರಾನಿಕ್ಸ್ ಪ್ರೈ. ಲಿ ಕೃಷಿ ಕ್ಷೇತ್ರಕ್ಕೆ ಪೂರಕವಾದ ವಾತಾವರಣ ನಿರ್ಮಿಸಿಕೊಡುವುದರಲ್ಲಿ ಒಂದು ಹೆಜ್ಜೆಯನ್ನು ಮುಂದೆ ಇಟ್ಟಿವೆ.

ಏ.26 ರಂದು ನಡೆದ ಈ ಕಾರ್ಯಕ್ರಮದ ಸದುಪಯೋಗ ಪಡೆದ ಗಜೇಂದ್ರಗಡ ಸೇರಿದಂತೆ ವಿವಿಧ ಊರುಗಳಿಂದ ಬಂದ ರೈತರ ಅಭಿಪ್ರಾಯ ಕೇಳೋಣ ಬನ್ನಿ

ಇನ್ನು ಕಾರ್ಯಕ್ರಮ ಆಯೋಜನೆ ಮಾಡಿ ರೈತರ ಶ್ರಯೋಭಿವೃದ್ಧಿಗೆ ದುಡಿಯುತ್ತಿರುವ ವೈಡ್ ಮೊಬಿಲಿಟಿ ಮೆಕಾಟ್ರಾನಿಕ್ಸ್ ಪ್ರೈ. ಲಿ ಸ್ಟಾರ್ಟ್ ಅಪ್ ಕಂಪನಿ ಸಂಸ್ಥಾಪಕರಾದ ರೋಹಿನಿ ಅವರು ಒಟ್ಟು ತಮ್ಮ ಕಂಪನಿಯಿಂದ ಅಭಿವೃದ್ಧಿಪಡಿಸಿದ ಮಶಿನ್ ಬಗ್ಗೆ ಮಾತನಾಡಿದರು.

ಇನ್ನು ವೈಡ್ ಮೊಬಿಲಿಟಿ ಮೆಕಾಟ್ರಾನಿಕ್ಸ್ ಪ್ರೈ. ಲಿ ನ ಸ್ಥಾಪಕರು ಮತ್ತು CEO ಶೇಖರ ಬಸವಣ್ಣ ಮಾತನಾಡಿ ರೈತರ ಶ್ರಯೋಭಿವೃದ್ಧಿಯಾಗಬೇಕು ಎಂದು ಹೇಳುವುದರ ಜೊತೆಗೆ ಅವರಿಗೆ ಪೂಕರವಾದ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಸದುಪಯೋಗಪಡಿಸಿಕೊಳ್ಳುವ ಬಗ್ಗೆ ತಿಳುವಳಿಕೆ ಹೇಳುವುದು ಅತೀ ಅವಶ್ಯವಾಗಿದ್ದು ಇಂದು ನಮ್ಮ ಕಂಪನಿ ಆ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಒಟ್ಟಾರೆಯಲ್ಲಿ ಭಾರತ ಸರ್ಕಾರ ರೈತರ ಶ್ರಯೋಭಿವೃದ್ಧಿಗೆ ಶ್ರಮಿಸುತ್ತಿರುವ ಬೆನ್ನಲ್ಲೇ ಇಂತಹ ಸ್ಟಾರ್ಟ್ ಅಪ್ ಗಳು ರೈತರು ಮತ್ತು ಸರ್ಕಾರದ ನಡುವೆ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ

ಯಂತ್ರದ ಉಪಯೋಗವೇನು?

ಉಪ್ಪಿನಕಾಯಿಗೆ ಬಳಸುವ ಗರಕಿನ್ ಎಷ್ಟರ ಮಟ್ಟಿಗೆ ಶುದ್ಧವಾಗಿ ಎಂದು ಈ ಮಶಿನ್ ಸಾಭೀತು ಮಾಡುತ್ತದೆ. ಗೆರ್ಕಿನ್ಸ್ ನ್ನು ಈ ಮಶಿನ್ ಎಕ್ಸ್-ರೇ ರೀತಿಯಲ್ಲಿ ಒಳಗಡೆಯ ಚಿತ್ರಣವನ್ನು ತೋರಿಸುತ್ತದೆ. ಕೆಟ್ಟ ಮತ್ತು ಹುಳುಕಾದ ಗರಕಿನ್ ಆದಲ್ಲಿ ಅದನ್ನು ಹೊರತೆದು ಉಪ್ಪಿನ ಕಾಯಿಗೆ ಬಳಸಲಾಗುತ್ತದೆ ಇದರಿಂದ ಗುಣಮಟ್ಟದ ಉಪ್ಪಿನಕಾಯಿ ಗ್ರಾಹಕರಿಗೆ ದೊರೆಯುತ್ತದೆ. ಆ ಮೂಲಕ ಗರಕಿನ ಬೇಡಿಕೆ ಹೆಚ್ಚುತ್ತದೆ. ರೈತ ಹೆಚ್ಚೆಚ್ಚು ಬೆಳೆಯಬಹುದಾಗಿದೆ.

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

28/04/2022 07:56 pm

Cinque Terre

83.45 K

Cinque Terre

2

ಸಂಬಂಧಿತ ಸುದ್ದಿ