ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ರೈತನಿಂದ ಸಿದ್ದಗೊಂಡ ಔಷಧಿ ಸಿಂಪಡಣೆ ಯಂತ್ರ

ನವಲಗುಂದ : ಇತ್ತೀಚಿಗೆ ಕೃಷಿ ಚಟುವಟಿಕೆಗಳು ಸಾಕಷ್ಟು ಚುರುಕುಗೊಂಡಿವೆ. ಆಧುನಿಕ ಯಂತ್ರಗಳನ್ನು ಸಿದ್ದಪಡಿಸಿ, ರೈತರು ಕೃಷಿ ಚಟುವಟಿಕೆಗಳಲ್ಲಿ ಮೇಲುಗೈ ಸಾಧಿಸುತ್ತಿರುವ ಅದೆಷ್ಟೋ ಉದಾಹರಣೆಗಳಿವೆ. ಅದೇ ಸಾಲಿಗೆ ಈಗ ನವಲಗುಂದ ಪಟ್ಟಣದ ಕುಂಬಾರ ಓಣಿಯ ಶಂಕರ ಶಿರೋಳ ಎಂಬ ರೈತ ಸೇರ್ಪಡೆಯಾಗಿದ್ದು, ಈತ ಔಷಧಿ ಸಿಂಪಡಣೆ ಯಂತ್ರವನ್ನು ಸಿದ್ದ ಪಡಿಸಿದ್ದಾರೆ.

ಮೊದಲು ಹೋಮ್ ಗಾರ್ಡ್ ಕೆಲಸ ಮಾಡುತ್ತಿದ್ದ ಶಂಕರ ಶಿರೋಳ ಕೆಲಸ ಕಳೆದುಕೊಂಡ ಪರಿಣಾಮ ತಮ್ಮನ್ನು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಔಷಧಿ ಸಿಂಪಡಣೆ ಯಂತ್ರವನ್ನು ಅವರೇ ಸಿದ್ದಪಡಿಸಿದ್ದಾರೆ. ಇನ್ನು ಯಂತ್ರದ ವಿಶಿಷ್ಟತೆಯತ್ತ ನೋಡಿದ್ರೆ, ಪೆಟ್ರೋಲ್ ನಿಂದ ಕೆಲಸ ಮಾಡುವ ಈ ಯಂತ್ರ ಮುನ್ನೂರು ಲೀಟರ್ ಸಾಮರ್ಥ್ಯದ ಟ್ಯಾಂಕ್ ಹೊಂದಿದ್ದು, ನೂರಾಐವತ್ತು ಮೀಟರ್ ಉದ್ದದ ಪೈಪ್ ಅಳವಡಿಸಲಾಗಿದೆ. ಇನ್ನು ಎರಡು ಗಂಟೆಗೆ ಒಂದು ಲೀಟರ್ ಪೆಟ್ರೋಲ್ ಬೇಕಾಗುವ ಯಂತ್ರ ಕೇವಲ ಔಷಧಿ ಸಿಂಪಡಣೆಗೆ ಅಷ್ಟೇ ಅಲ್ಲದೇ ವಾಟರ್ ಸರ್ವಿಸ್ ಕೆಲಸವನ್ನು ಮಾಡಬಲ್ಲದು.

-ವಿನೋದ ಇಚ್ಚಂಗಿ, ಪಬ್ಲಿಕ್ ನೆಕ್ಸ್ಟ್ ನವಲಗುಂದ

Edited By : Shivu K
Kshetra Samachara

Kshetra Samachara

17/12/2021 10:08 am

Cinque Terre

51.34 K

Cinque Terre

0