ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಐಎಲ್ಎಸ್ ಲ್ಯಾಂಡಿಂಗ್ ಸೇವೆ ಇದ್ದರೂ ಲ್ಯಾಂಡ್ ಆಗ್ತಿಲ್ಲ ವಿಮಾನ: ಉಪಯೋಗ ಇಲ್ಲವಾಯಿತೇ ಸೇವೆ

ಹುಬ್ಬಳ್ಳಿ: ದಟ್ಟವಾದ ಮೋಡ, ಭಾರೀ ಮಳೆ, ಮಂಜು ಮುಸುಕಿದ ವಾತಾವರಣವಿದ್ದರೂ ಇನ್ನು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ವಿಮಾನ ಸುಲಭವಾಗಿ, ಸುರಕ್ಷಿತವಾಗಿ ಇಳಿಸಬಹುದು ಎಂಬುವಂತ ಹಿನ್ನಲೆಯಲ್ಲಿ ಐಎಲ್ಎಸ್ ಲ್ಯಾಂಡಿಂಗ್ ಸೇವೆಯನ್ನು ಹುಬ್ಬಳ್ಳಿಯ ವಿಮಾನ ನಿಲ್ದಾಣ ಆರಂಭ ಮಾಡಿದೆ. ಆದರೆ ಈ ಯೋಜನೆ ಲಾಭ ಮಾತ್ರ ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಐಎಲ್ಎಸ್ ಲ್ಯಾಂಡಿಂಗ್ ಸೇವೆ ಕಾರ್ಯವೈಖರಿ ವಿಫಲವಾಯಿತೆ...?

ಹೌದು..ಇನ್‌ಸ್ಟ್ರುಮೆಂಟಲ್ ಲ್ಯಾಂಡಿಂಗ್ ಸಿಸ್ಟಂ ( ಐಎಲ್‌ಎಸ್ ) ಹುಬ್ಬಳ್ಳಿಯಲ್ಲಿ ಕಾರ್ಯಾರಂಭ ಮಾಡಿದೆ. ಆದರೂ‌ ಕೂಡ ಮಂಜಿನಲ್ಲಿ ಲ್ಯಾಂಡಿಂಗ್ ಮಾಡಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಉದಾಹರಣೆ ಎಂಬುವಂತೆ ಇಂದು ಹುಬ್ಬಳ್ಳಿಗೆ ಆಗಮಿಸಿದ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರು ಪ್ರಯಾಣಿಸುತ್ತಿದ್ದ ವಿಮಾನ ಸಮಸ್ಯೆ ಎದುರಿಸಿದೆ.

ಇತ್ತೀಚಿಗೆ ಮೂರು ನಾಲ್ಕು ಬಾರಿ ಹವಾಮಾನ ವೈಪರೀತ್ಯದಿಂದ ಇಲ್ಲಿ ಇಳಿಯಬೇಕಾಗಿದ್ದ ವಿಮಾನ ವಿಮಾನವನ್ನು ಮಂಗಳೂರು, ಬೆಂಗಳೂರು ಸೇರಿದಂತೆ ಬೇರೆ ಬೇರೆ ವಿಮಾನ ನಿಲ್ದಾಣಗಳಿಗೆ ಕಳುಹಿಸಿ ನಾಲ್ಕಾರು ಗಂಟೆಗಳ ಬಳಿಕ ವಾಪಸ್ ಇಲ್ಲಿ ಬಂದಿತ್ತು. ಇನ್ನೂ ಕೆಲವೊಂದು ವಿಮಾನ ಆಗಸದಲ್ಲೇ ಅರ್ಧ ಗಂಟೆ, ಗಂಟೆಗಳ ಕಾಲ ಸುತ್ತು ಹೊಡೆದು ಬಳಿಕ ಸುರಕ್ಷಿತವಾಗಿ ಇಳಿಸಲಾಗಿತ್ತು. ಆದರೆ ಇನ್ನುಮುಂದೆ ಇಂತಹ ಯಾವುದೇ ಸಮಸ್ಯೆಗಳು ಕೂಡ ಎದುರಾಗುವುದಿಲ್ಲ ಎಂದು ಐಎಲ್‌ಎಸ್ ಸೇವೆಗೆ ಸಾಂಕೇತಿಕವಾಗಿ ‌ಚಾಲನೇ ನೀಡಲಾಗಿದೆ. ಆದರೂ‌ ಕೂಡ ಯಾವುದೇ ಪ್ರಯೋಜನ ಆಗುತ್ತಿಲ್ಲ.

2020ರ ಜನವರಿಯಿಂದ, ರೆಡ್, ಟವರ್‌ ಅಳವಡಿಕೆ ಕಾಮಗಾರಿ ನಡೆದಿತ್ತು. ನವೆಂಬರ್‌ನಲ್ಲಿಯೇ ಇದರ ಕಾರ್ಯ ಬಹುತೇಕ ಪೂರ್ಣಗೊಂಡಿತ್ತು. ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಚಾಲನೆ ಕೂಡ ನೀಡಲಾಗಿತ್ತು. ಆದರೂ‌ ಕೂಡ ಹುಬ್ಬಳ್ಳಿಯಲ್ಲಿ ಲ್ಯಾಂಡಿಂಗ್ ಸಮಸ್ಯೆ ಎದುರಾಗುತ್ತಲೇ ಇದೆ.

Edited By : Shivu K
Kshetra Samachara

Kshetra Samachara

10/12/2021 01:07 pm

Cinque Terre

23.45 K

Cinque Terre

1