ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : ಅಪ್ಪನ ಕೃಷಿಗೆ ಮಗನ ಯಂತ್ರ..!

ವರದಿ: ಪ್ರಶಾಂತ ಲೋಕಾಪುರ , ಧಾರವಾಡ

ಧಾರವಾಡ : ಆಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ! ಮನಸೊಂದಿದ್ದರೆ ಮಾರ್ಗವು ಉಂಟು

ಕೆಚ್ಚೆದೆ ಇರಬೇಕೆಂದು, ಹೇಳುವ ಸಾಲು ಪ್ರತಿ ಮನುಷ್ಯನ ಛಲ ಹುಮ್ಮಸ್ಸು ಯಶಸ್ವಿಯಾಗುತ್ತದೆ ಎಂಬಂತೆ ಕೃಷಿಯಲ್ಲಿ ಹೊಸ ಕನಸು ಕಂಡ ಯುವ ಪ್ರತಿಭೆಯೊಂದು ಸೌರಚಾಲಿತ ಕೃಷಿ ಕಳೆ ಯಂತ್ರ ಆವಿಷ್ಕಾರ ಮಾಡಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾನೆ

ಕಳೆದ ಎರಡು ವರ್ಷಗಳಿಂದ ಶಾಲೆಗಳು ಆರಂಭ ಆಗಿರಲಿಲ್ಲ. ಮನೆಯಲ್ಲಿ ಪಾಠ ಕಲಿಯುತ್ತಿದ್ದ

ನವಲೂರ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಈಗಷ್ಟೆ ಎಸ್ಎಸ್ಎಲ್‌ಸಿ ಮುಗಿಸಿದ ಬಸವರಾಜ

ಜಾಪಣ್ಣವರ ಎಂಬ ಯುವಕ ಕೃಷಿ ಚಟುವಟಿಕೆಯಲ್ಲಿ ಹೆಚ್ಚು ದುಡಿಮೆ ಆಗುವುದನ್ನು ಗಮನಿಸಿ ಅಪ್ಪನ ಕೆಲಸಕ್ಕೆ ಸಹಾಯವಾಗೋ ರೀತಿಯಲ್ಲಿ ಕೃಷಿ ಕಳೆ ಯಂತ್ರ ತಯಾರಿಸಿ ಅಪ್ಪನ ಕೃಷಿ ಚಟುವಟಿಕೆಯಲ್ಲಿ ಸಹಕಾರಿಯಾಗಿದ್ದಾನೆ.

ಸೌರ ವಿದ್ಯುತ್ ಚಾಲಿತ ಕಳೆ ಕತ್ತರಿಸುವ ಯಂತ್ರವನ್ನು ಅಲ್ಯೂಮಿನಿಯಂ ಪೈಪ್, ಸೋಲಾರ್ ಪ್ಯಾನಲ್, ಸೈಕಲ್ ರಿಮ್, ಬ್ಯಾಟರಿ ಬಳಸಿ ಕೇವಲ 10 ಸಾವಿರ ರೂ.ನಲ್ಲಿ ಯಂತ್ರ ತಯಾರಿಸಿದ್ದಾನೆ. ಈ ಯಂತ್ರವು ರೈತರಿಗೆ ತುಂಬಾ ಸಹಕಾರಿಯಾಗಿದ್ದು,ಈ ಯಂತ್ರದಿಂದ ಸೋಲಾರ್ ಚಾರ್ಜ್ ಮೂಲಕ ಬ್ಯಾಟರಿ ಚಾರ್ಜ್ ಆಗಿ ಮೋಟಾರ್ ತಿರುಗುತ್ತದೆ.ಯಂತ್ರಕ್ಕೆ ಅಳವಡಿಸಿರುವ ಬ್ಲೇಡ್ಗಳು ಕಳೆಯನ್ನು ಕತ್ತರಿಸುತ್ತೆ.ಎತ್ತುಗಳಿಗೆ,ಟ್ರಾಕ್ಟರ್ ಗಳಿಂಗಿತ ಇದರ ವೆಚ್ಚ ಬಹಳ ಕಡಿಮೆ ಇದ್ದು,ರೈತರಿಗೆ ಸಾಕಷ್ಟು ಸಹಕಾರಿ ಆಗಲಿದೆ ಎನ್ನಲಾಗಿದೆ.

ಇನ್ನೂ ಪಬ್ಲಿಕ್ ನೆಕ್ಸ್ಟ್ ಜೊತೆಗೆ ಮಾತನಾಡಿದ ಯುವಕ‌ ಬಸವರಾಜ ಜಾಪಣ್ಣವರ,ಈ ಯಂತ್ರ ತುಂಬಾ ಚಿಕ್ಕದಾಗಿರುವುದರಿಂದ ಬೆಳೆಗೆ ಯಾವುದೇ ತೊಂದರೆಯಾಗುವದಿಲ್ಲ. ಸೋಲರ್ ಮೂಲಕ ಬ್ಯಾಟರಿ ಚಾರ್ಜ್‌ ಆಗಿ ಮೊಟರ್ ತಿರುಗುತ್ತೆ. ಯಂತ್ರಕ್ಕೆ ಅಳವಡಿಸಿರೋ ಬ್ಲೇಡ್‌ಗಳು ಕಳೆಯನ್ನು ಕತ್ತರಿಸುತ್ತೆ ಎಂದು ಬಾಲಕ ವಿವರಿಸಿದ್ದಾನೆ.

ವಿದ್ಯಾರ್ಥಿ ಮೊದಲಿನಿಂದಲೂ ಏನಾದರೂ ಸಾಧನೆ ಮಾಡುವ ತವಕದಲ್ಲಿದ್ದನಂತೆ ಈ ಹಿಂದೆಯೂ ಕಸದಿಂದ ರಸ ಮಾಡಬಹುದು ಎಂದು ಸದಾ ಒಂದಿಲ್ಲೊಂದು ಹೊಸ ಆವಿಷ್ಕಾರ ಮಾಡುತ್ತಿದ್ದನಂತೆ ಈತನ ಪ್ರತಿಭೆ ಗುರುತಿಸಿ ಶಾಲಾ ಶಿಕ್ಷಕರು ಇನ್ ಸ್ಪೈಡರ್ ಅವಾರ್ಡಗೆ ಸೂಚಿಸಿ ಆಯ್ಕೆಯಾದ ನಂತರ ಇದರಿಂದ ಬಂಧ ಪ್ರೋತ್ಸಾಹ ಧನದಿಂದಲೇ ಈ ಯಂತ್ರಕ್ಕೆ ಬಳಕೆಯಾಗುವ ಪರಿಕರ ಕೊಂಡಿದ್ದಾನೆ.

ಅಪ್ಪನಿಗೆ ಕೃಷಿಯಲ್ಲಿ ಹೆಚ್ಚು ಕೆಲಸವಾಗುತ್ತದೆಂದು ಟ್ರ್ಯಾಕ್ಟರ್ ಮೂಲಕ ಅಥವಾ ಜೊತೆಗೆ ಬಾಡಿಗೆ ಎತ್ತುಗಳ ಮೂಲಕ ಕೃಷಿ ಕಾರ್ಯ ಮಾಡಬೇಕಂದ್ರೆ ರೂ.1000-1500 ವರೆಗೆ ಹೆಚ್ಚಿನ ಹಣ ವ್ಯಯವಾಗುತ್ತಿತ್ತು.ಹೀಗಾಗಿ ಅಪ್ಪನಿಗೆ ನೇರವಾಗೋ ರೀತಿಯಲ್ಲಿ ಏನಾದ್ರೂ ಮಾಡಬೇಕು ಎಂದುಕೊಂಡು ಈ ಸಾಧನೆ ಮಾಡಿದ್ದೇನೆ ಎಂದು ಹರ್ಷ ವ್ಯಕ್ತಪಡಿಸಿದನು. ಇನ್ನೂ ಮಗನ ಸಾಧನೆ ಕುರಿತು ತಂದೆ ಕಲ್ಲಪ್ಪ ಜಾಪಣ್ಣವರ ಭಾವುಕರಾಗಿ ಸಂತಸ ವ್ಯಕ್ತಪಡಿಸಿದರು.

Edited By : Nagesh Gaonkar
Kshetra Samachara

Kshetra Samachara

26/08/2021 06:01 pm

Cinque Terre

35.71 K

Cinque Terre

0

ಸಂಬಂಧಿತ ಸುದ್ದಿ