ಅಣ್ಣಿಗೇರಿ: ವಿಜಯದಶಮಿ ನಿಮಿತ್ತವಾಗಿ ಅಣ್ಣಿಗೇರಿ ತಾಲೂಕಿನ ಶಲವಡಿ ಗ್ರಾಮದ ಶ್ರೀ ಶಾಂಭವಿ ದೇವಿಯ ಮೊದಲ ರಥೋತ್ಸವವು ಅದ್ಧೂರಿಯಾಗಿ ನೆರವೇರಿತು.
ಶಲವಡಿಯ ದೇಸಾಯಿ ಪೇಟೆ ಓಣಿಯ ಶಾಂಭವಿ ದೇಗುಲದಿಂದ ರಥೋತ್ಸವಕ್ಕೆ ಗ್ರಾಮ ಶ್ರೀ ಗುರುಶಾಂತ ಮಹಾಸ್ವಾಮಿಗಳು ಚಾಲನೆ ನೀಡಿದರು. ಅಲ್ಲಿಂದ ಸಾಗಿದ ರಥವು ಶ್ರೀ ವೀರಭದ್ರೇಶ್ವರ ದೇವಸ್ಥಾನಕ್ಕೆ ತಲುಪಿ ಮರಳಿ ಶಾಂಭವಿ ದೇಗುಲಕ್ಕೆ ಮರಳಿತು. ಜಾತ್ರಾಮಹೋತ್ಸವದಲ್ಲಿ ವಿವಿಧ ವಾದ್ಯಮೇಳಗಳು ಮೊಳಗಿದವು.
ಕಳೆದ ಒಂಬತ್ತು ದಿನಗಳಿಂದ ದೇವಸ್ಥಾನದಲ್ಲಿ ದೇವಿ ಪುರಾಣ, ಅನ್ನ ಸಂತರ್ಪಣೆ ನೇರಿತು.
Kshetra Samachara
05/10/2022 07:32 pm