ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಡಿಜೆ ಡ್ಯಾನ್ಸ್ ಮೂಲಕ ಭರ್ಜರಿ ವಿಸರ್ಜನೆಗೆ ಹೊರಟ ಹುಬ್ಬಳ್ಳಿ ಗಣಪ

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಪ್ರತಿಷ್ಠಾಪನೆ ಮಾಡಿದ್ದ ಸಾರ್ವಜನಿಕ ಗಣಪತಿಗಳನ್ನು ಇಂದು ವಿಸರ್ಜನೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಡಿಜೆ, ಡ್ಯಾನ್ಸ್‌ ಮೂಲಕ ಯುವಕರು ಭರ್ಜರಿ ಸ್ಟೆಪ್ ಹಾಕುವುದರ ಮೂಲಕ ವಿಘ್ನೇಶ್ವರನ ವಿಸರ್ಜನೆ ಮಾಡುತ್ತಿದ್ದಾರೆ.

ಹೌದು. ಹುಬ್ಬಳ್ಳಿಯಲ್ಲಿ ಪ್ರತಿಷ್ಠಾಪನೆ ಮಾಡಿದ ಸಾರ್ವಜನಿಕ ಗಣಪತಿಯನ್ನು ನಾಳೆ ಅಂದರೆ ಶನಿವಾರ ಹುಣ್ಣುಮೆ ಇರುವುದರಿಂದ ಇಂದೇ ಗಣಪತಿ ವಿಸರ್ಜನೆಯನ್ನು ಮಾಡುತ್ತಿದ್ದಾರೆ. ಈ ಗಣಪತಿ ಹುಬ್ಬಳ್ಳಿ ಚಾ ಮಹಾರಾಜಾ, ಹುಬ್ಬಳ್ಳಿ ಕಾ ಮಹಾರಾಜಾ, ಗೌಳಿಗಲ್ಲಿ ಗಣಪತಿ, ದುರ್ಗದ ಬೈಲ್ ಗಣಪತಿ ಸೇರಿದಂತೆ ಎಲ್ಲ ಸಾರ್ವಜನಿಕ ಗಣಪತಿಯನ್ನು ಇಂದು ವಿಸರ್ಜನೆ ಮಾಡುತ್ತಿದ್ದಾರೆ.

ಇನ್ನು ಪೊಲೀಸ್ ಇಲಾಖೆ ರಾತ್ರಿ 10 ಗಂಟೆವರೆಗೆ ಡಿಜೆ ಹಚ್ಚಲು ಅವಕಾಶ ನೀಡಿದ್ದು, ಗಜಾನನ ಮಂಡಳಿಯವರು ವಿಸರ್ಜನೆಗೆ ಆದಷ್ಟು ಬೇಗನೆ ಆರಂಭ ಮಾಡಿದ್ದಾರೆ. ಯುವಕರು ಕುಣಿದು ಕುಪ್ಪಳಿಸುವ ಮೂಲಕ ಗಣಪತಿ ವಿಸರ್ಜನೆ ಮಾಡುತ್ತಿದ್ದಾರೆ.

Edited By :
Kshetra Samachara

Kshetra Samachara

09/09/2022 10:27 pm

Cinque Terre

100.1 K

Cinque Terre

2

ಸಂಬಂಧಿತ ಸುದ್ದಿ