ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಛಬ್ಬಿ ಗಣಪತಿ ಮಹಿಮೆ ಅಪಾರ!; ವರಸಿದ್ಧಿ ವಿನಾಯಕ ದರ್ಶನಕ್ಕೆ ಜನಸಾಗರ

ಹುಬ್ಬಳ್ಳಿ: ತಾಲ್ಲೂಕಿನ ಛಬ್ಬಿ ಗ್ರಾಮದಲ್ಲಿ ಕುಲಕರ್ಣಿ ಮನೆತನದಿಂದ ಕೆಂಪು ಗಣಪತಿ ಉತ್ಸವ ಆ.31ರಿಂದ ಆರಂಭಗೊಂಡಿದ್ದು, ಸೆ. 2ರ ವರೆಗೆ ನಡೆಯಲಿದೆ. ರಾಮಚಂದ್ರ ಕುಲಕರ್ಣಿ, ಮೋಹನರಾವ ಕುಲಕರ್ಣಿ, ವಿನಾಯಕ ಕುಲಕರ್ಣಿ, ನಾರಾಯಣ‌ ರಾವ ಕುಲಕರ್ಣಿ, ಸೋಮರಾವ ಕುಲಕರ್ಣಿ, ವಿಶ್ವನಾಥ ಕುಲಕರ್ಣಿ ಹಾಗೂ ಮಾಲತೇಶ ಕುಲಕರ್ಣಿ ಅವರ ಮನೆಗಳಲ್ಲಿ ಅದ್ಧೂರಿಯಾಗಿ ಉತ್ಸವ ಆಚರಿಸಲಾಗುತ್ತಿದೆ.

ಬಲಗೈಯಲ್ಲಿ ಮುರಿದ ದಂತ, ಎಡಗೈಯಲ್ಲಿ ಈಶ್ವರ ಲಿಂಗ ಹಾಗೂ ಉಳಿದೆರಡು ಕೈಗಳಲ್ಲಿ ಆಯುಧ ಹೊಂದಿರುವುದು ಇಲ್ಲಿನ ಕೆಂಪು ಗಣಪತಿ ವಿಶೇಷ. ಮೈಸೂರು ಹಾಗೂ ಇಂದೋರ್‌ನ ಅರಮನೆಗಳಲ್ಲಿ ಮಾತ್ರ ಇಂತಹ ಗಣಪತಿ ಕಾಣಬಹುದು.

ಉತ್ಸವದ ಮೊದಲ ದಿನ 7 ಮನೆಗಳ ಗಣಪತಿಗಳನ್ನು ಮೆರವಣಿಗೆಯಲ್ಲಿ ತಂದು ಚಂದ್ರೋದಯದ ಸಮಯಕ್ಕೆ ಪ್ರತಿಷ್ಠಾಪಿಸಲಾಗಿದ್ದು ಇಂದು ರಾತ್ರಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ನಂತರದ 2 ದಿನ ಭಕ್ತರಿಗೆ ಎಲ್ಲಾ ಮನೆಗಳಲ್ಲಿ ದರ್ಶನ- ಪ್ರಸಾದ ವ್ಯವಸ್ಥೆ ಮಾಡಲಾಗಿದೆ.

ಉತ್ತರ ಕರ್ನಾಟಕದಲ್ಲಿ ಈತನ ಮಹಿಮೆ ಅಪಾರ. ಏನೇ ಬೇಡಿಕೊಂಡರೂ ಎಲ್ಲ ಇಷ್ಟಾರ್ಥಗಳೂ ಸಿದ್ಧಿಸುತ್ತವೆ ಎಂಬ ನಂಬಿಕೆಯಿದೆ. ಪ್ರತಿವರ್ಷವೂ ಈತನಿಗೆ ಒಂದೇ ವರ್ಣ, ಒಂದೇ ಸೈಜ್. ಸಾರ್ವಜನಿಕ ಗಣೇಶ ಮೂರ್ತಿಗಳನ್ನು ರಸ್ತೆ ಇತ್ಯಾದಿಗಳಲ್ಲಿ ಪ್ರತಿಷ್ಠಾಪನೆ ಮಾಡಿದರೆ, ಇದನ್ನು ಮಾತ್ರ ಮನೆಯಲ್ಲಿ ಪ್ರತಿಷ್ಠಾಪನೆ ಮಾಡಿ ಪೂಜೆ ಸಲ್ಲಿಸಲಾಗುತ್ತದೆ.

ಎಲ್ಲ ಗಣಪ ಬಲಗೈಯಿಂದ ಆಶೀರ್ವಾದ ಮಾಡ್ತಿದ್ರೆ, ಈ ಗಣಪತಿ ಕೈಯಲ್ಲಿ ಮುರಿದ ದಂತವಿರುತ್ತೆ. ಮತ್ತೊಂದು ಕೈಯಲ್ಲಿ ಲಿಂಗವಿರುತ್ತದೆ. ಅಮಾವಾಸ್ಯೆ ನಂತರ ಚಂದ್ರ ಹುಟ್ಟಿದ ಮೇಲೇನೇ ಈತನ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಪ್ರತಿ ಗಣೇಶೋತ್ಸವ ಸಂದರ್ಭವೂ 3 ದಿನಗಳ ಕಾಲ ಪ್ರತಿಷ್ಠಾಪನೆ ಮಾಡಲಾಗುತ್ತದೆ. 21 ಇಂಚಿನ ಸಿಂಧೂರ ಗಣಪ ಪ್ರತಿ ಬಾರಿಯೂ ಪ್ರತಿಷ್ಠಾಪಿಸಲಾಗುತ್ತದೆ.

ಕುಲಕರ್ಣಿಯವರ ಮನೆಯಲ್ಲಿ 1827ರಿಂದಲೂ ಗಣಪತಿ ಪ್ರತಿಷ್ಠೆ ಮುಂದುವರೆಯುತ್ತಾ ಬಂದಿದೆ! ಈ ಬಾರಿ 195ನೇ ಗಣೇಶೋತ್ಸವ ಸಂಭ್ರಮ. ಇಂತಹ ಪವರ್ ಫುಲ್ ಗಣೇಶ ಮೂರ್ತಿ ಪ್ರತಿಷ್ಠಾಪನೆಗೂ ಒಂದು ಹಿನ್ನೆಲೆಯಿದೆ. ಛಬ್ಬಿಯ ತಮ್ಮಪ್ಪ ಕುಲಕರ್ಣಿ ಎನ್ನೋರಿಗೆ ಸಂತಾನ ಭಾಗ್ಯವಿರಲಿಲ್ಲ.

ಈ ವೇಳೆ ಗಣೇಶೋತ್ಸವ ಮಾಡುವಂತೆ ಶ್ರೀ ಕೃಷ್ಣೇಂದ್ರ ಸ್ವಾಮಿಗಳು ಸಲಹೆ ನೀಡಿದ್ದರು. ವರ ಸಿದ್ಧಿ ವಿನಾಯಕ ಗಣಪತಿ ಪ್ರತಿಷ್ಠಾಪನೆ ಮಾಡಿದ ಒಂದು ವರ್ಷದೊಳಗೆ ಕುಲಕರ್ಣಿ ಅವರಿಗೆ ಗಂಡು ಸಂತಾನ ಪ್ರಾಪ್ತಿಯಾಯಿತಂತೆ. ಹೀಗಾಗಿ ಅಂದಿನಿಂದ ಇಂದಿನವರೆಗೆ ನಿರಂತರವಾಗಿ ಗಣೇಶೋತ್ಸವ ಮುಂದುವರಿದುಕೊಂಡು ಬರಲಾಗಿದೆ. ಸದ್ಯ 6ನೇ ತಲೆಮಾರಿನಿಂದ ಗಣೇಶೋತ್ಸವ ಆಚರಣೆ ಮುಂದುವರಿದಿದೆ.

Edited By : Shivu K
Kshetra Samachara

Kshetra Samachara

01/09/2022 02:33 pm

Cinque Terre

24.69 K

Cinque Terre

0

ಸಂಬಂಧಿತ ಸುದ್ದಿ