ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ರೆಡಿ ಆಗ್ತಿದ್ದಾನೆ ಹುಬ್ಬಳ್ಳಿ ಕಾ ರಾಜಾ: ಹೇಗಿರುತ್ತೇ ಈ ವರ್ಷದ ಗಣೇಶೋತ್ಸವ ಸಂಭ್ರಮ?

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ಗಣೇಶ ಚತುರ್ಥಿ ಅಂದರೆ ಹುಬ್ಬಳ್ಳಿ-ಧಾರವಾಡ ಜಿಲ್ಲೆಯ ಜನರಿಗೆ ಮಾತ್ರವಲ್ಲದೆ ರಾಜ್ಯಕ್ಕೆ ರಾಜ್ಯವೇ ಹೆಮ್ಮೆ ಪಡುವ ಆಚರಣೆ. ಈ ಆಚರಣೆ ಕೊರೊನಾ ಕರಿನೆರಳಿನಿಂದ ಕಳೆಗುಂದಿತ್ತು. ಆದರೆ ಈಗ ಮತ್ತೇ ರಂಜಿಸಲು ಸಿದ್ಧತೆ ನಡೆದಿದ್ದು, ರೆಡಿಯಾಗ್ತಿದ್ದಾನೆ ಹುಬ್ಬಳ್ಳಿ ಕಾ ರಾಜಾ.

ಹೌದು...ಹುಬ್ಬಳ್ಳಿ ಕಾ ರಾಜಾ ಎಂದೇ ಖ್ಯಾತಿ ಪಡೆದ ದಾಜೀಬಾನ ಪೇಟೆಯ ಗಣಪತಿ ಈಗಾಗಲೇ ಸಿದ್ಧವಾಗುತ್ತಿದ್ದಾನೆ. ಎರಡು ವರ್ಷಗಳಿಂದ ಆಚರಣೆಯಾಗದೇ ಇರುವ ಹಿನ್ನೆಲೆ ಈ ಬಾರಿ ಅದ್ಭುತ ಸಂಭ್ರಮಕ್ಕೆ ಸಿದ್ಧತೆ ಮಾಡಲಾಗುತ್ತಿದೆ. ಈ ಬಾರಿ ವಿಶೇಷ ಅಂದರೆ ಈ ಮೊದಲು 21 ಅಡಿ ಎತ್ತರ ಇರುತ್ತಿದ್ದ ಹುಬ್ಬಳ್ಳಿ ಕಾ ರಾಜಾ ಈ ಬಾರಿಗೆ 25 ಫುಟ್ ಎತ್ತರ ಇರುವ ಮೂಲಕ ಸಂಭ್ರಮಕ್ಕೆ ಹೊಸ ಮೆರಗು ನೀಡಲಾಗುತ್ತಿದೆ. ಹಾಗಿದ್ದರೇ ಹೇಗಿರುತ್ತೇ ಈ ವರ್ಷದ ಆಚರಣೆ ಅಂತೀರಾ ಹೇಳ್ತಾರೆ ಕೇಳಿ ಉತ್ಸವ ಸಮಿತಿಯ ಸದಸ್ಯರು.

ಇನ್ನೂ ಕಳೆದ ಎರಡು ವರ್ಷ ಯಾವುದೇ ಡಿಜೆ ಹಾಡು, ಕುಣಿತ ಇಲ್ಲದೇ ಹಬ್ಬ ಕಳೆಗುಂದಿತ್ತು. ಆದರೆ ಈ ವರ್ಷ ಕೊರೊನಾದ ಕರಿನೆರಳು ಸರಿದಿದ್ದು, ಈ ವರ್ಷ ಅದ್ದೂರಿಯಾಗಿ ಆಚರಿಸಲು ವಾಣಿಜ್ಯನಗರಿ ಸಿದ್ಧವಾಗಿದೆ. ಹುಬ್ಬಳ್ಳಿ ಕಾ ರಾಜಾ ಕೂಡ ಸಿದ್ದವಾಗುತ್ತಿದ್ದು, ಸಿದ್ಧತೆ ಕಾರ್ಯ ಭರದಿಂದ ಸಾಗಿದೆ. ಈಗಾಗಲೇ ಹೊರ ರಾಜ್ಯದಿಂದ ಹುಬ್ಬಳ್ಳಿಗೆ ಬಂದಿರುವ ಕಲಾವಿದರು ಸುಮಾರು ಮೂರು ಲಕ್ಷ ಟೆಂಡರ್ ಪಡೆದುಕೊಂಡು ಹುಬ್ಬಳ್ಳಿ ಕಾ ರಾಜಾ ಮೂರ್ತಿ ತಯಾರಿಕೆಯಲ್ಲಿ ತೊಡಗಿದ್ದಾರೆ.

ಒಟ್ಟಿನಲ್ಲಿ ಈ ವರ್ಷದ ಗಣೇಶೋತ್ಸವ ಹೊಸ ಮೆರಗನ್ನು ಪಡೆಯುವ ಮೂಲಕ ಸಾಕಷ್ಟು ಆಚರಣೆಗೆ ಹೆಸರಾಗಲಿದೆ. ಅಲ್ಲದೇ ಕಳೆದುಕೊಂಡ ನೆನಪು ಮೆಲುಕು ಹಾಕುವ ಮೂಲಕ ವಿನೂತನ ಆಚರಣೆಗೆ ಈ ವರ್ಷ ಸಾಕ್ಷಿಯಾಗಲಿದೆ.

Edited By :
Kshetra Samachara

Kshetra Samachara

04/08/2022 08:03 pm

Cinque Terre

51.81 K

Cinque Terre

6

ಸಂಬಂಧಿತ ಸುದ್ದಿ