ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಪರಿಸರ ಸ್ನೇಹಿ ಮಣ್ಣಿನ ಬಸವಣ್ಣ: ಅಮಾವಾಸ್ಯೆಗೆ ಹೆಚ್ಚಿತು ಬೇಡಿಕೆ

ಕುಂದಗೋಳ : ರೈತಾಪಿ ಜಗತ್ತನ್ನು ಆರಾಧಿಸುವ ರೈತನ ಒಡನಾಡಿ ಎತ್ತುಗಳನ್ನು ಪೂಜಿಸುವ ವಿಶೇಷ ಅಮಾವಾಸ್ಯೆಯೆ ಈ ಮಣ್ಣೆತ್ತಿನ ಅಮಾವಾಸ್ಯೆ.

ಮಣ್ಣೆತ್ತಿನ ಅಮಾವಾಸ್ಯೆ ಅಂಗವಾಗಿ ಬಸವಣ್ಣ ರೂಪಿ ಮಣ್ಣಿನ ಎತ್ತುಗಳ ತಯಾರಿ ಹಾಗೂ ಮಾರಾಟ ಕುಂದಗೋಳ ಪಟ್ಟಣದಲ್ಲಿ ಜೋರಾಗಿದ್ದು ಅದರಲ್ಲೂ ಪರಿಸರ ಸ್ನೇಹಿ ಬಣ್ಣವಿಲ್ಲದ ಮಣ್ಣಿನ ಎತ್ತುಗಳನ್ನು ತಯಾರಿಸುವಲ್ಲಿ ಕಾಂತಪ್ಪ ಬಡಿಗೇರ್ ಕುಟುಂಬ ತಮ್ಮ ಪರಂಪರೆ ಮುನ್ನೆಡೆಸುತ್ತಿದೆ. ಈ ಬಡಿಗೇರ್ ಕುಟುಂಬದ ಮಹಿಳೆಯರು, ಮಕ್ಕಳು, ಯುವಕರು ಮಣ್ಣಿನ ಎತ್ತುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದು ಗಣೇಶ ಚತುರ್ಥಿಗೆ ಗಣಪ, ನಾಗರ ಪಂಚಮಿಗೆ ನಾಗಪ್ಪನ ಮೂರ್ತಿ ಸಹ ಇವರು ತಯಾರಿಸಿ ಮಾರಾಟ ಮಾಡುತ್ತಾರೆ.

ವಿಶೇಷವಾಗಿ ಮಹಿಳೆಯರು ಸಹ ಮಣ್ಣಿನ ಎತ್ತಿನ ಮೂರ್ತಿ ತಯಾರಿಸುವಲ್ಲಿ ನಿರತರಾಗಿ ಅವರ ಕುಟುಂಬಕ್ಕೆ ಹೆಗಲು ಕೊಟ್ಟಿದ್ದಾರೆ.

ಒಟ್ಟಾರೆ ಮಣ್ಣೆತ್ತಿನ ಅಮವಾಸ್ಯೆ ಅಂಗವಾಗಿ ಮಣ್ಣಿನ ಎತ್ತುಗಳ ತಯಾರಿಕೆ ಜೋರಾಗಿದ್ದು, ಪ್ರತಿಯೊಬ್ಬರ ಮನೆಯಲ್ಲೂ ಅಮಾವಾಸ್ಯೆ ಆಚರಣೆ ಇರುವುದರಿಂದ ಈ ಸಾರಿ 50 ರಿಂದ 100 ರೂಪಾಯಿವರೆಗೂ ಮಣ್ಣಿನ ಎತ್ತುಗಳು ಮಾರಾಟ ಆಗಲಿವೆ.

-ಶ್ರೀಧರ ಪೂಜಾರ, ಪಬ್ಲಿಕ್ ನೆಕ್ಸ್ಟ್, ಕುಂದಗೋಳ

Edited By : Shivu K
Kshetra Samachara

Kshetra Samachara

27/06/2022 05:49 pm

Cinque Terre

25.95 K

Cinque Terre

0

ಸಂಬಂಧಿತ ಸುದ್ದಿ