ಕುಂದಗೋಳ: ಧಾರ್ಮಿಕ ಆಚರಣೆಗಳ ಮೂಲಕವೇ ತನ್ನ ವೈಶಿಷ್ಟ್ಯ ಕಾಯ್ದುಕೊಂಡ, ಸಂಗೀತ ಕ್ಷೇತ್ರದ ಕೊಡುಗೆ ಮೂಲಕ ಸಂಗೀತದ ತವರೂರಾದ ಕುಂದಗೋಳ ಪಟ್ಟಣದಲ್ಲಿ ಇಂದು ದ್ಯಾಮವ್ವದೇವಿ ಮೂರ್ತಿ ಪ್ರತಿಷ್ಠಾಪನೆ ಮತ್ತು ನೂತನ ಗೋಪುರ ಹಾಗೂ ಕಳಸಾರೋಹಣ ಕಾರ್ಯಕ್ರಮ ಆರಂಭ ಕಂಡಿತು.
ಹೌದು ! ದ್ಯಾಮವ್ವದೇವಿ ಜಾತ್ರಾ ಮಹೋತ್ಸವದ ಮೊದಲ ದಿನ ಇಂದು ತಾಯಿ ದ್ಯಾಮವ್ವದೇವಿ ನೂತನ ಮೂರ್ತಿ ಮೆರವಣಿಗೆ ಭಂಡಾರದ ಹಬ್ಬ, ಅತಿ ವಿಜೃಂಭಣೆಯಿಂದ ಪರಮ ಪೂಜ್ಯ ಮಲ್ಲಯ್ಯ ಸ್ವಾಮಿಗಳು ಶಿವಾನಂದಮಠ ಹಾಗೂ ಅಭಿನವ ಕಲ್ಯಾಣಪುರ ಬಸವಣ್ಣನವರ ನೇತೃತ್ವದಲ್ಲಿ ನೆರವೇರಿತು.
ದ್ಯಾಮವ್ವದೇವಿ ಮೂರ್ತಿ ಮೆರವಣಿಗೆಗೆ ಪೂರ್ಣ ಕುಂಭ ಕೊಡ ಹೊತ್ತು ಮಹಿಳೆಯರ ವಿಹಂಗಮ ನೋಟ, ಜೋಗಮ್ಮಗಳ ಭಕ್ತಿ ಸೇವೆ, ಜಾನಪದ ಡೊಳ್ಳು ಮೇಳಗಳ ನಡುವೆ ಸಂಪೂರ್ಣ ಕುಂದಗೋಳ ಪಟ್ಟಣ ಸುತ್ತಿ ಆಧ್ಯಾತ್ಮಿಕ ಕಂಪನ್ನು ಬೀರಿತು.
ಮೆರವಣಿಗೆಯುದ್ದಕ್ಕೂ ಆರ್ಕೆಸ್ಟ್ರಾ ಹಾಡುಗಳು, ಕುದುರೆ ಸವಾರಿ, ಮನರಂಜನೆ ನೀಡುವ ಗೊಂಬೆಗಳ ನೃತ್ಯ, ಯುವಕರು, ನಾಗರೀಕರು, ಗಣ್ಯರ ಜಾಂಜ್ ಮೇಳಕ್ಕೆ ಮನಸ್ಸು ಬಿಚ್ಚಿ ಕುಣಿಯುವ ದೃಶ್ಯಗಳು ಹಾಗೂ ಮಹಿಳೆಯರ ಕೋಲಾಟದ ಸೊಬಗು ದ್ಯಾಮವ್ವದೇವಿ ಜಾತ್ರಾ ಸೊಬಗನ್ನು ನೂರ್ಮಡಿಗೊಳಿಸಿತು.
ದ್ಯಾಮವ್ವದೇವಿ ಜಾತ್ರೆಯ ಅಂಗವಾಗಿ ಭಕ್ತಾಧಿಗಳಿಗೆ ಉಪಹಾರ ಪ್ರಸಾದದ ಸೇವೆ ಒದಗಿಸಲಾಗಿತ್ತು.
Kshetra Samachara
06/05/2022 04:55 pm