ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕೊಟಗೊಂಡಹುಣಸಿ ಗ್ರಾಮದಲ್ಲಿ ಲೋಕ ಕಲ್ಯಾಣಾರ್ಥ ಚಂಡಿಕಾ ಹೋಮ

ಹುಬ್ಬಳ್ಳಿ: ತಾಲೂಕಿನ ಕೊಟಗೊಂಡಹುಣಸಿ ಗ್ರಾಮದಲ್ಲಿ ಲೋಕ ಕಲ್ಯಾಣಾರ್ಥ ಸಮುದ್ಧ ಮಳೆ, ಬೆಳೆಗಾಗಿ ಚಂಡಿಕಾ ಹೋಮ ಮಾಡಲಾಯಿತು.

ಕೊಟಗೊಂಡಹುಣಸಿ ಗ್ರಾಮದ ಶ್ರೀಸಾಯಿ ಸೇವಾ ಸಮಿತಿ ಹಾಗೂ ಸಮಸ್ತ ಗ್ರಾಮಸ್ಥರ ಸಂಯುಕ್ತ ಆಶ್ರಯದಲ್ಲಿ ಹೊನ್ನತ್ತೆಮ್ಮಾ- ಎಲ್ಲಮ್ಮ ದೇವಸ್ಥಾನದಲ್ಲಿ ನೆರವೇರಿದ ಲೋಕ ಕಲ್ಯಾಣಾರ್ಥ ಚಂಡಿಕಾ ಹೋಮವನ್ನು ವೇದಮೂರ್ತಿ ಗುರುಸಿದ್ದಯ್ಯ ಹಿರೇಮಠ ಹಾಗೂ ಚನ್ನಬಸಯ್ಯಶಾಸ್ತ್ರಿಗಳ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ಜರುಗಿದವು.

ಈ ಒಂದು ಹೋಮದಲ್ಲಿ ವಿಘ್ನೇಶ್ವರ, ಉಮಾ ಮಹೇಶ್ವರ, ನವದುರ್ಗೇಶ್ವರ, ಚಂಡಿಕಾ ತಾಯಿಗೆ ಪೂಜೆ ಹಾಗೂ ಹೊನ್ನತ್ತೆಮ್ಮಾ, ಎಲ್ಲಮ್ಮ ದೇವರಿಗೆ ರುದ್ರಾಭಿಷೇಕ, ಹೋಮ ಸೇವೆಗಳ ಮೂಲಕ‌ ಕಲ್ಯಾಣೋತ್ಸವ ಕಾರ್ಯಕ್ರಮ ಸಂಪನ್ನಗೊಂಡಿತು. ಇದೇ ವೇಳೆ ಮುಂಗಾರು ಆರಂಭಗೊಂಡಿದ್ದು ಮಳೆ, ಬೆಳೆ ಚೆನ್ನಾಗಿ ಆಗಲಿ, ರೈತನ ಬೆಳೆ ಉತ್ತಮವಾಗಲಿ, ಎಲ್ಲರ ಬದುಕು ಸಮೃದ್ದವಾಗಲಿ ಎಂದು ಪ್ರಾರ್ಥನೆ ಮಾಡಲಾಯಿತು. ಗ್ರಾಮ ಒಳಗೊಂಡಂತೆ ಸುತ್ತಲಿನ ಗ್ರಾಮಗಳ ಜನತೆ ದೇಗುಲಕ್ಕೆ ಬಂದು ಪೂಜೆ ಮಾಡಿಸಿದರು.

Edited By : Shivu K
Kshetra Samachara

Kshetra Samachara

06/05/2022 01:10 pm

Cinque Terre

14.36 K

Cinque Terre

0

ಸಂಬಂಧಿತ ಸುದ್ದಿ