ಕುಂದಗೋಳ : ಅಬ್ಬಾ ! ಹಳ್ಳಿಗಾಡಿನ ಜಾತ್ರೆ ಎಂದರೇ ಅಲ್ಲಿ ಸಂಭ್ರಮ ಸಂತೋಷ ಬಲು ಜೋರು, ಇನ್ನೂ ವಿಶೇಷ ಅಂದ್ರೆ ಈ ಶಕ್ತಿ ಪ್ರದರ್ಶನ, ಯುವಕರ ಮೋಜಿನ ಸ್ಪರ್ಧೆಗಳು ನೋಡುಗರಿಗೆ ರಸದೌತಣವನ್ನೇ ನೀಡುತ್ತವೆ.
ಹೌದು ! ಅಂತಹ, ಜಾತ್ರಾ ಮಹೋತ್ಸವಕ್ಕೆ ಕುಂದಗೋಳ ಪಟ್ಟಣದ ಕಾಳಿದಾಸನಗರದ ಮಾರುತೇಶ್ವರ ಜಾತ್ರೆ ಸಂಭ್ರಮ ಸಾಕ್ಷಿಯಾಗಿದ್ದು, ಜಾತ್ರೆಯ ನಿಮಿತ್ತ ಮಾರುತೇಶ್ವರನಿಗೆ ಅಭಿಷೇಕ ಪೂಜಾಲಂಕಾರ ಗೋಪಾಲ ತುಂಬಿಸುವ ಕಾರ್ಯಕ್ರಮ ಹಾಗೂ ಭಕ್ತರಿಂದ ಶಿವಾನಂದ ಮಠದ ಶ್ರೀಗಳಿಗೆ ಪಾದಪೂಜೆ ಕಾರ್ಯಕ್ರಮ ಅತಿ ಭಕ್ತಿ ಭಾವದಿಂದ ನೆರವೇರಿತು.
ಜಾತ್ರೆ ನಿಮಿತ್ತವಾಗಿ ನಡೆದ ದುಂಡಿ ಕಲ್ಲು ಎತ್ತುವ ಸ್ಪರ್ಧೆ ಹಾಗೂ ಸಂಜೆ ನಡೆದ ತೆಂಗಿನಕಾಯಿ ಕೀಳುವ ಸ್ಪರ್ಧೆಗಳು ಜನರನ್ನು ರಂಜಿಸುವುದರ ಜೊತೆಗೆ ಜಾತ್ರೆಗೆ ಕಳೆ ತಂದವು ಸ್ಪರ್ಧಾಳುಗಳಿಗೆ ಹುಮ್ಮಸ್ಸು ನೀಡಿದವು.
ಇನ್ನೂ ಸಂಜೆ ನಡೆದ ರಥೋತ್ಸವ ಕಾರ್ಯಕ್ರಮದಲ್ಲಿ ಕುಂದಗೋಳ ಹಾಗೂ ಸುತ್ತ ಮುತ್ತಲಿನ ಭಕ್ತಾಧಿಗಳು ಭಾಗವಹಿಸಿ ಅನ್ನಸಂತರ್ಪಣೆ ಸವಿದು ಪುನೀತರಾದರೇ, ಮಕ್ಕಳು ಮಹಿಳೆಯರು ಜಾತ್ರೆಯಲ್ಲಿನ ಆಟೋಟಗಳಲ್ಲಿ ಭಾಗಿಯಾಗಿ ಸಂತಸಪಟ್ಟಿದ್ದಾರೆ.
ಜಾತ್ರೆಯಲ್ಲಿ ಧರ್ಮಸಭೆ, ಧರ್ಮ ಜಾಗೃತಿ ಪ್ರವಚನ, ಭಜನಾ ಸಂಕೀರ್ತನೆ ಯಶಸ್ವಿಯಾಗಿ ನಡೆದವು.
Kshetra Samachara
25/04/2022 07:14 pm