ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಮಹಾವೀರರ ಜಯಂತಿ ದಿನದಂದು ಮದ್ಯ, ಮಾಂಸ ಮಾರಾಟ ನಿಷೇಧಕ್ಕೆ ಆಗ್ರಹ

ಕುಂದಗೋಳ: ಎಪ್ರಿಲ್ 14ರಂದು ನಡೆಯುವ ಮಹಾವೀರ ಜಯಂತಿ ಆಚರಣೆಯನ್ನು ಕೆಲ ಸರ್ಕಾರಿ ಕಚೇರಿಗಳಲ್ಲಿ ಆಚರಣೆ ಮಾಡುವುದಿಲ್ಲ. ಇನ್ನೂ ಕೆಲ ಸರ್ಕಾರಿ ಕಚೇರಿಗಳಲ್ಲಿ ಮಹಾವೀರರ ಭಾವಚಿತ್ರವೇ ಇಲ್ಲಾ ಎಂದು ಜೈನ ಧರ್ಮದ ಮುಖಂಡ ಬಸವರಾಜ ಯೋಗಪ್ಪನವರ ಆಗ್ರಹಿಸಿದ್ದಾರೆ.

ಕುಂದಗೋಳ ಪಟ್ಟಣದಲ್ಲಿ ಇಂದು ಪಬ್ಲಿಕ್ ನೆಕ್ಸ್ಟ್ ಉದ್ದೇಶಿಸಿ ಮಾತನಾಡಿದ ಅವರು, 'ತ್ಯಾಗ, ನಿಷ್ಠೆ, ಸತ್ಯ, ಧರ್ಮದ ಸಂಕೇತವಾದ ಮಹಾವೀರರ ಜಯಂತಿ ಅದರದೇ ಆದ ಪಾವಿತ್ರ್ಯತೆ ಹೊಂದಿದೆ. ಈ ಮಹಾವೀರ ಜಯಂತಿ ಆಚರಣೆಗೆ ಸರ್ಕಾರ ಜಿಲ್ಲಾ ತಾಲೂಕು ಮಟ್ಟದಲ್ಲಿ ನೀಡುವ ಸೌಲಭ್ಯಗಳು ಜೈನ ಧರ್ಮದವರಿಗೆ ತಲುಪುತ್ತಿಲ್ಲ' ಎಂದು ಬೇಸರ ವ್ಯಕ್ತಪಡಿಸಿದರು.

ಇನ್ನು ಅಹಿಂಸಾ ಪರಮಧರ್ಮ ಸಾರಿದ ಮಹಾವೀರ ಜಯಂತಿ ಆಚರಣೆ ದಿನ ಮದ್ಯ, ಮಾಂಸ ಮಾರಾಟ ನಿಷೇಧ ಮಾಡಬೇಕು. ಇದು ಸರ್ಕಾರಕ್ಕೆ ಮುಖ್ಯಮಂತ್ರಿಗಳಿಗೆ ಒತ್ತಾಯ. ಈ ಬಗ್ಗೆ ಸೂಕ್ತ ನಿರ್ಣಯ ನೀಡಿದೆ ಇದ್ದಲ್ಲಿ ಉಗ್ರ ಹೋರಾಟ ಕೈಗೊಳ್ಳುವ ಎಚ್ಚರಿಕೆ ನೀಡಿದರು. ‌

Edited By : Nagesh Gaonkar
Kshetra Samachara

Kshetra Samachara

09/04/2022 09:51 pm

Cinque Terre

22.46 K

Cinque Terre

0

ಸಂಬಂಧಿತ ಸುದ್ದಿ