ಹುಬ್ಬಳ್ಳಿ: ಉಣಕಲ್ ಶ್ರೀ ಸದ್ಗುರು ಸಿದ್ದೇಶ್ವರ ಸ್ವಾಮಿಗಳ ಯುಗಾದಿ ಮಹೋತ್ಸವ ಹಾಗೂ ಶ್ರೀ ಸದ್ಗುರು ಸಿದ್ದೇಶ್ವರರ ೧೦೧ನೇ ವರ್ಷದ ಪುಣ್ಯರಾಧನೆ ಮಹೋತ್ಸವದ ನಿಮಿತ್ತ ಹೆಲಿಕಾಪ್ಟರ್ ಮೂಲಕ ಪುಷ್ಪ ನಮನವನ್ನು ಸಲ್ಲಿಸಲಾಯಿತು.
ಬೆಳಗಾವಿಯ ಬಾಹುಬಲಿ ಧರೆಣ್ಣವರ, ಗುರಪ್ಪ ಕುಸುಗಲ್, ಬಾಲರಾಜ್ ಜಾಲಹಳ್ಳಿ, ನಿಂಗಪ್ಪ ಮಳೆಪ್ಪನವರ ಅವರಿಂದ ಈ ವ್ಯವಸ್ಥೆಯನ್ನು ಮಾಡಲಾಗಿತ್ತು ಎಂದು ಶ್ರೀ ಸಿದ್ದಪ್ಪಜ್ಜ ಮಠ ಆಡಳಿತ ಸಮಿತಿ ತಿಳಿಸಿದೆ. ಈ ಸಂದರ್ಭದಲ್ಲಿ ನೆರೆದಿದ್ದ ಸಾವಿರಾರು ಭಕ್ತಾದಿಗಳು ಜಯ ಘೋಷಣೆ ಕೂಗಿದರು. ಹೆಲಿಕಾಪ್ಟರ್‌ನಿಂದ ಪುಷ್ಪನಮನ ಸಲ್ಲಿಸುತ್ತಿದ್ದುದನ್ನು ಕುತೂಹಲದಿಂದ ವೀಕ್ಷಿಸಿದರು.
Kshetra Samachara
03/04/2022 06:35 pm