ಅಣ್ಣಿಗೇರಿ: ತಾಲೂಕಿನ ಮಣಕವಾಡದ ಶ್ರೀ ಅನ್ನದಾನೇಶ್ವರ ದೇವಮಂದಿರ ಮಠ ರಾಜ್ಯದ ಪ್ರಸಿದ್ಧ ಮಠಗಳಲ್ಲೊಂದು..ಶ್ರೀ ಅಭಿನವ ಮೃತ್ಯುಂಜಯ ಶ್ರೀಗಳು ಪ್ರವಚನ ಹೇಳುವ ಮೂಲಕವೇ ಸಾಕಷ್ಟು ಹೆಸರು ಮಾಡಿದ್ದಾರೆ. ರಾಜ್ಯದಿಂದಷ್ಟೇ ಅಲ್ಲದೇ ಹೊರ ರಾಜ್ಯದಿಂದಲೂ ಭಕ್ತರು ಆಗಮಿಸುವಂತೆ ಮಾಡಿದ ಕೀರ್ತಿ ಅಭಿನವ ಮೃತ್ಯುಂಜಯ ಶ್ರೀಗಳಿಗೆ ಸಲ್ಲುತ್ತದೆ.
ಹಾಗೇ ಈ ಮಠದ ಭಕ್ತರಾದ ಅಣ್ಣಿಗೇರಿ ಕುಟುಂಬದ ಸಹೋದರರಾದ ಅಮೃತಪ್ಪ ಅಣ್ಣಿಗೇರಿ, ವೀರಪ್ಪ ಅಣ್ಣಿಗೇರಿ,ಶಿವಯೋಗಿ ಅಣ್ಣಿಗೇರಿ ಅವರು ಮಠಕ್ಕೆ ಶಾಲೆ ನಿರ್ಮಿಸುವ ಸಲುವಾಗಿ 6 ಎಕರೆ 19 ಗುಂಟೆ ಜಾಗವನ್ನು ದಾನ ಮಾಡಿದ್ದಾರೆ. ಇದರ ನೋಂದಣಿ ಕಾರ್ಯವೂ ಮುಗಿದಿದೆ. ಮಠಕ್ಕೆ ಈ ಹಿಂದೆಯೂ ಅಣ್ಣಿಗೇರಿ ಕುಟುಂಬ ಹಲವಾರು ಎಕರೆ ಜಮೀನು ಹಾಗೂ ಲಕ್ಷಾಂತರ ರೂಪಾಯಿಗಳನ್ನು ದೇಣಿಗೆ ಕೊಟ್ಟಿದೆ. ಅಷ್ಟೇ ಅಲ್ಲದೆ ಇಂದಿಗೂ ಸದಾ ಮಠದ ಅಭಿವೃದ್ಧಿ ಕೆಲಸಗಳಲ್ಲಿ ಮಠದ ಭಕ್ತರಾಗಿ ನಿಲ್ಲುತ್ತಿರುವುದು ಗಮನಾರ್ಹ. ಇವ್ರ ಈ ಕಾರ್ಯಕ್ಕೆ ಅಭಿನವ ಮೃತ್ಯುಂಜಯ ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಂದೀಶ ಬುಳ್ಳಾ, ಪಬ್ಲಿಕ್ ನೆಕ್ಸ್ಟ್, ಅಣ್ಣಿಗೇರಿ
Kshetra Samachara
31/03/2022 09:17 pm