ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : ದಲಿತರ ಮನೆಗಳಲ್ಲಿ ದೀಪ ಬೆಳಗಿದ ವಿದ್ಯಾರಣ್ಯ ಸ್ವಾಮೀಜಿ

ಧಾರವಾಡ: ಅಸ್ಪೃಶ್ಯತೆ ಹೋಗಲಾಡಿಸಿ ಸಮಾಜದಲ್ಲಿ ಸಮಾನತೆ ಹುಟ್ಟು ಹಾಕಲು ವಿವಿಧ ಮಠ, ಮಂದಿರಗಳು ಸಾಕಷ್ಟು ಕಾರ್ಯಕ್ರಮಗಳನ್ನು ಮಾಡುತ್ತಲೇ ಇವೆ. ಈಗ ಅದೇ ರೀತಿ ಹಂಪಿಯ ವಿರುಪಾಕ್ಷ ವಿದ್ಯಾರಣ್ಯ ಮಹಾ ಸಂಸ್ಥಾನದ ವಿದ್ಯಾರಣ್ಯ ಭಾರತಿ ಸ್ವಾಮೀಜಿ ಧಾರವಾಡದ ದಲಿತ ಕೇರಿಗೆ ಬಂದು ಮನೆ, ಮನೆಗಳಲ್ಲಿ ದೀಪ ಬೆಳಗಿಸುವ ಮೂಲಕ ಗಮನಸೆಳೆದಿದ್ದಾರೆ.

ಧಾರವಾಡದ ಜಾಂಬವಂತ ನಗರದಲ್ಲಿನ ಮನೆಗಳಿಗೆ ಭೇಟಿ ನೀಡಲು ಬಂದ ಸ್ವಾಮೀಜಿಗೆ ಅದ್ಧೂರಿ ಸ್ವಾಗತ ದೊರೆಯಿತು. ಸುಮಂಗಲೆಯರು ಸ್ವಾಮೀಜಿಗೆ ಆರತಿ ಬೆಳಗಿ ಅವರನ್ನು ಸ್ವಾಗತಿಸಿದರು. ಅಲ್ಲದೇ ಭಜನೆ ಮೇಳದೊಂದಿಗೆ ಸ್ವಾಮೀಜಿಯನ್ನು ಮನೆ, ಮನೆಗೆ ಕರೆದುಕೊಂಡು ಬರಲಾಯಿತು.

ಜಾಂಬವಂತನಗರದಲ್ಲಿ ಹೆಚ್ಚಾಗಿ ಹರಿಜನರೇ ವಾಸಿಸುತ್ತಿದ್ದು, ಸನಾತನ ಧರ್ಮದ ವಿವಿಧ ಜನಾಂಗದವರು ಒಂದಾಗಬೇಕು. ಅಸ್ಪೃಶ್ಯತೆ ನಿವಾರಣೆಯಾಗಬೇಕು ಎಂಬ ಉದ್ದೇಶದಿಂದ ವಿದ್ಯಾರಣ್ಯ ಭಾರತಿ ಸ್ವಾಮೀಜಿ ಅವರ ಮನೆಯಲ್ಲಿರುವ ದೇವರ ಕೋಣೆಗಳಿಗೆ ಹೋಗಿ ಪೂಜೆ ಮಾಡುವ ಮೂಲಕ ದೀಪ ಬೆಳಗಿಸುತ್ತಿದ್ದಾರೆ ಎಂದು ಶಾಸಕ ಅರವಿಂದ ಬೆಲ್ಲದ ತಿಳಿಸಿದರು.

ಸಮಾಜದ ಹಿಂದುಳಿದ ಜನಾಂಗ ಕೂಡ ಮುಂದೆ ಬರಬೇಕು. ಹಿಂದುಳಿದವರು ಎಂದು ಅವರನ್ನು ಹಿಂದೆಯೇ ಬಿಡಬಾರದು. ಇಲ್ಲಿ ದಲಿತರು, ಮೇಲ್ವರ್ಗದವರು ಎಂಬ ಬೇಧ ಇರಬಾರದು ಎಂಬ ಉದ್ದೇಶದಿಂದ ಹಕ್ಕ ಬುಕ್ಕರಿಗೆ ಧೀಕ್ಷೆ ಕೊಟ್ಟು ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಕಾರಣೀಭೂತರಾದ ವಿದ್ಯಾರಣ್ಯ ಪೀಠದ ಗುರುಗಳೇ ಧಾರವಾಡಕ್ಕೆ ಬಂದು ಇಂತದೊಂದು ಸಮಾಜಮುಖಿ ಕಾರ್ಯಕ್ಕೆ ಮುಂದಾಗಿರುವುದಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

Edited By : Shivu K
Kshetra Samachara

Kshetra Samachara

03/03/2022 05:00 pm

Cinque Terre

87.97 K

Cinque Terre

1

ಸಂಬಂಧಿತ ಸುದ್ದಿ