ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಮಹಾಶಿವರಾತ್ರಿ ಭಕ್ತರಿಗೆ ಶಿವನ ಕರ್ತವ್ಯದ ರೂಪಗಳ ದರ್ಶನ

ಕುಂದಗೋಳ : ಮಹಾಶಿವರಾತ್ರಿ ಅಂಗವಾಗಿ ಈಶ್ವರೀಯ ವಿಶ್ವ ವಿದ್ಯಾಲಯವು ಶಿವನ ಕರ್ತವ್ಯದ ಪ್ರತೀಕವಾದ 23 ರೂಪಗಳನ್ನು ನಿರ್ಮಿಸಿ ಭಕ್ತ ಜನರ ದರ್ಶನಕ್ಕೆ ಅವಕಾಶ ಕಲ್ಪಿಸಿ ಶಿವನ ರೂಪದ ಕರ್ತವ್ಯದ ಸಾರವನ್ನು ತಿಳಿಸುವ ಕಾರ್ಯಕ್ರಮ ಕೈಗೊಂಡಿದ್ದಾರೆ.

ಕಳೆದ 35 ವರ್ಷಗಳಿಂದ ಪ್ರತಿ ವರ್ಷ ಮಹಾಶಿವರಾತ್ರಿ ಅಂಗವಾಗಿ ಒಂದಿಲ್ಲೊಂದು ಶಿವನ ವೈಶಿಷ್ಟ್ಯವನ್ನು ತಯಾರಿಸುವ ಈಶ್ವರಿಯ ವಿಶ್ವವಿದ್ಯಾಲಯದ ಸೇವಕರು, ಈ ವರ್ಷ 23 ಶಿವಲಿಂಗಳ ರೂಪ ಹಾಗೂ ಆ ಶಿವಲಿಂಗದ ರೂಪ ತಳೆದ ಶಿವ ಮಾಡುವ ಕರ್ತವ್ಯವನ್ನು ಜನರಿಗೆ ತಿಳಿಸುತ್ತಿದ್ದಾರೆ.

ಮಹಾಶಿವರಾತ್ರಿ ಅಂಗವಾಗಿ ಮೂರು ದಿನ ನಡೆಯುವ ಈ ಕಾರ್ಯಕ್ರಮದಲ್ಲಿ ಕುಂದಗೋಳ ಪಟ್ಟಣ ಹಾಗೂ ಸುತ್ತ ಮುತ್ತಲಿನ ಹಳ್ಳಿಗರು ಭಾಗವಹಿಸುತ್ತಿದ್ದು, ಶಿವನ ರೂಪ ನೋಡಲು ಆಗಮಿಸಿದ ಭಕ್ತಾಧಿಗಳಿಗೆ ದ್ರಾಕ್ಷಿ, ಖರ್ಜೂರ ಪ್ರಸಾಧ ಸೇವೆ ಸಹ ನೀಡಲಾಗುತ್ತಿದೆ‌.

ಇನ್ನೂ ವಿಶೇಷ ಎಂದರೇ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಪ್ರತಿಷ್ಠಾಪನೆ ಮಾಡಿರುವ ಶಿವ ಲಿಂಗಗಳನ್ನು ನಿತ್ಯವೂ ದಂಪತಿಗಳಿಂದ ಪೂಜೆ ಮಾಡಿಸಿ ಲೋಕದ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸುತ್ತಾರೆ.

Edited By : Manjunath H D
Kshetra Samachara

Kshetra Samachara

01/03/2022 02:49 pm

Cinque Terre

61.12 K

Cinque Terre

0

ಸಂಬಂಧಿತ ಸುದ್ದಿ