ಧಾರವಾಡ: ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ನವಲಗುಂದ ತಾಲೂಕಿನ ಶಿರೂರು ಗ್ರಾಮದಲ್ಲಿ ಬಾಲಲೀಲಾ ಸಂಗಮೇಶ್ವರ ಹೂಲಿ ಅಜ್ಜನವರ ಜಾತ್ರಾ ಮಹೋತ್ಸವವನ್ನು ಅದ್ಧೂರಿಯಿಂದ ಆಚರಿಸಲಾಯಿತು.
ಶಿರೂರು ಗ್ರಾಮದ ಈ ಜಾತ್ರಾ ಮಹೋತ್ಸವಕ್ಕೆ ಸುತ್ತಮುತ್ತಲಿನ ಗ್ರಾಮಸ್ಥರೆಲ್ಲರೂ ಚಕ್ಕಡಿ, ಟ್ರ್ಯಾಕ್ಟರ್ ತೆಗೆದುಕೊಂಡು ಬಂದಿದ್ದರು. ಸಂಕ್ರಾಂತಿ ಹಬ್ಬದ ಅಂಗವಾಗಿ ಮಾಡಲಾಗಿದ್ದ ಮಾದ್ಲಿ, ಸಜ್ಜಿ ರೊಟ್ಟಿ, ಬಗೆ ಬಗೆಯ ಪಲ್ಯ ಸೇರಿದಂತೆ ವಿವಿಧ ಖಾದ್ಯಗಳನ್ನು ಕಟ್ಟಿಕೊಂಡು ಬಂದ ಜನತೆ, ಮಲಪ್ರಭಾ ಎಡದಂಡೆ ಕಾಲುವೆ ಮೇಲೆ ಕುಳಿತು ಕುಟುಂಬ ಸಮೇತರಾಗಿ ವಿಶೇಷ ಭೋಜನ ಸವಿದರು.
ಮಲಪ್ರಭಾ ಎಡದಂಡೆ ಕಾಲುವೆಗೆ ನೀರು ಹರಿಬಿಡಲಾಗಿತ್ತು. ಕಾಲುವೆಯಲ್ಲಿ ಇಳಿದು ಸ್ನಾನ ಮಾಡುವ ಮೂಲಕ ಯುವಜನತೆ ಸಂಭ್ರಮಿಸಿದರು. ಸಂಜೆ ಹೊತ್ತಿಗೆ ಬಾಲಲೀಲಾ ಸಂಗಮೇಶ್ವರ ಹೂಲಿ ಅಜ್ಜನವರ ತೆಪ್ಪದ ತೇರನ್ನು ಮಲಪ್ರಭಾ ಎಡದಂಡೆ ಕಾಲುವೆಯಲ್ಲಿ ಎಳೆಯಲಾಯಿತು. ಜಾತ್ರಾ ಮಹೋತ್ಸವಕ್ಕೆ ಬಂದಿದ್ದ ಜನತೆ ತೆಪ್ಪದ ತೇರಿಗೆ ಉತ್ತುತ್ತಿ, ಬಾಳೆಹಣ್ಣುಗಳನ್ನು ತೂರಿ ಭಕ್ತಿಯ ನಮನ ಸಲ್ಲಿಸಿದರು.
Kshetra Samachara
15/01/2022 08:21 pm