ಅಣ್ಣಿಗೇರಿ : ಕಳೆದ ಎರಡು ವರ್ಷಗಳಿಂದ ಶ್ರೀ ಅಮೃತೇಶ್ವರ ದೇವರ ಜಾತ್ರೆ ಕೊರೋನಾ ಕರಿ ಛಾಯೆಯಿಂದಾಗಿ ಕಳೆಗುಂದಿತ್ತು. ಆದರೆ ಈ ಬಾರಿ ಶ್ರೀ ಅಮೃತೇಶ್ವರ ದೇವರ ಅನುಗ್ರಹದಿಂದಾಗಿ ಜಾತ್ರೆ ನೆರವೇರಿದ್ದು, ಭಕ್ತರಲ್ಲಿ ಸಡಗರ ಸಂಭ್ರಮ ಮನೆ ಮಾಡಿತ್ತು.
ಹೌದು ಜಾತ್ರೆಯ ಪ್ರಮುಖ ವಿಶೇಷತೆ ಅಂದ್ರೆ ಅದು ಜಾತ್ರೆಯಲ್ಲಿ ರಥೋತ್ಸವ ಎರಡು ಬಾರಿ ಜರುಗುತ್ತೆ, ಅದು ಕೂಡ ಬೆಳಿಗ್ಗೆ ಒಮ್ಮೆ ಹಾಗೂ ಸಂಧ್ಯಾಕಾಲದಲ್ಲಿ ಐದು ಗಂಟೆಗೆ ಮತ್ತೊಮ್ಮೆ ಮಹಾ ರಥೋತ್ಸವ ಜರಗುತ್ತೆ, ಅದೇ ರೀತಿ ಇಂದು ಎರಡು ರಾಥೋತ್ಸವ ಕೂಡ ಸಂಭ್ರಮದಿಂದ ನೆರವೇರಿದೆ. ಇನ್ನು ಈ ಬಗ್ಗೆ ದೇವಸ್ಥಾನದ ಧರ್ಮದರ್ಶಿ ಲಿಂಗರಾಜ ಕುಲಕರ್ಣಿ ಪಬ್ಲಿಕ್ ನೆಕ್ಸ್ಟ್ ಜೊತೆ ಮಾತನಾಡಿದರು...
ಇನ್ನು ಜಾತ್ರೆಗೆ ಆಗಮಿಸಿದ ಭಕ್ತರು ಸಹ ಜಾತ್ರೆಯ ಸಡಗರದ ಬಗ್ಗೆ ತಮ್ಮ ಸಂತಸವನ್ನು ಹಂಚಿಕೊಂಡರು.
Kshetra Samachara
18/12/2021 07:38 pm