ಕುಂದಗೋಳ : ಕಾರ್ತಿಕ ಮಾಸದ ಅಂಗಾರಕ ಸಂಕಷ್ಟಿ ಅಂದ್ರೇ ಅದಕ್ಕೊಂದು ವಿಶೇಷತೆ ಅದರಲ್ಲೂ ಗಣೇಶನ ಭಕ್ತರಿಗೆ ಅಂಗಾರಕ ಸಂಕಷ್ಟಿ ಬಂದ್ರೇ ಸಾಕು ವಿಶೇಷ ಪೂಜೆ ಅಭಿಷೇಕವನ್ನು ವಿಘ್ನ ನಿವಾರಕನಿಗೆ ಅತಿ ಶ್ರದ್ಧಾ ಭಕ್ತಿಯಿಂದ ಸಲ್ಲಿಸುತ್ತಾರೆ.
ಅದರಂತೆ ಕುಂದಗೋಳ ಪಟ್ಟಣದ ಮಾರ್ಕೇಟ್ ರಸ್ತೆಯಲ್ಲಿರುವ ಗಣೇಶನಿಗೆ ಗಜಾನನ ಭಜನಾ ಸಂಘದ ಯುವಕರು ಅಭಿಷೇಕ ಸಲ್ಲಿಸಿ ಗಂಧದ ಪೂಜೆ ಸಮರ್ಪಿಸಿದರು. ಕುಂದಗೋಳ ಪಟ್ಟಣದ ನೂರಾರು ಭಕ್ತರು ಆಗಮಿಸಿ ಗಣಪನ ದರ್ಶನ ಪಡೆದರು. ಜೊತೆಗೆ ನಾಗಪ್ಪನಿಗೂ ಸಹ ಪೂಜೆ ಸಲ್ಲಿಸಿದ ಭಕ್ತಾಧಿಗಳು ಕಾರ್ತಿಕಮಾಸದ ಪ್ರಯುಕ್ತ ದೀಪಗಳ ಪೂಜೆ ಸಹ ಕೈಗೊಂಡಿದ್ದಾರೆ.
Kshetra Samachara
23/11/2021 05:53 pm