ಕುಂದಗೋಳ: ತಾಲೂಕಿನ ಕಮಡೊಳ್ಳಿ ಗ್ರಾಮದ ಶ್ರೀ ಲೋಚನೇಶ್ವರ ವಿರಕ್ತಮಠದ ರಾಚೋಟೇಶ್ವರ ಮಹಾಸ್ವಾಮಿಗಳ ಅಂತ್ಯಕ್ರಿಯೆ ವಿವಿಧ ಮಠಾಧೀಶರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ನಿನ್ನೆ ಸಂಜೆ ಏಳು ಗಂಟೆಗೆ ನೆರವೇರಿತು.
ಲೋಚನೇಶ್ವರ ವಿರಕ್ತಮಠದ ಹಿಂದಿನ ಲಿಂಗೈಕ್ಯ ಮಹಾಸ್ವಾಮಿಗಳ ಸರದಿ ಗದ್ದುಗೆಗಳ ಪಕ್ಕದಲ್ಲೇ ಮಠದ ಐದನೇ ಪೀಠಾಧಿಪತಿ ರಾಚೋಟೇಶ್ವರ ಶ್ರೀಗಳ ಅಂತ್ಯಕ್ರಿಯೆ ನೆರವೇರಿಸಲಾಯಿತು. ಅಂತ್ಯಕ್ರಿಯೆಗೂ ಮುನ್ನ ರಾಜಕೀಯ ಮುಖಂಡರು ಹಾಗೂ ವಿವಿಧ ಸಂಘ ಸಂಸ್ಥೆಗಳು ಮುಖಂಡರು, ಕುಂದಗೋಳ ತಾಲೂಕಿನ ಅಪಾರ ಭಕ್ತರು ರಾಚೋಟೇಶ್ವರ ಶ್ರೀಗಳ ದರ್ಶನ ಪಡೆದರು.
ರಾಚೋಟೇಶ್ವರ ಮಹಾಸ್ವಾಮಿಗಳ ಲಿಂಗೈಕ್ಯ ಪಾರ್ಥಿವ ಶರೀರವನ್ನು ಇಡೀ ಕಮಡೊಳ್ಳಿ ಗ್ರಾಮದ ತುಂಬಾ ತೆರೆದ ಹೂಗಳಿಂದ ಅಲಂಕೃತವಾದ ಟ್ರ್ಯಾಕ್ಟರ್'ನಲ್ಲಿ ಮೆರವಣಿಗೆ ಮಾಡಲಾಯಿತು. ಈ ಸಂದರ್ಭದಲ್ಲಿ ಗ್ರಾಮದ ಮಹಿಳಾ ಭಕ್ತರು ರಸ್ತೆಯುದ್ದಕ್ಕೂ ಬಿಡಿಸಿದ ರಂಗೋಲಿಗಳು ಭಕ್ತಿಯನ್ನು ನೂರ್ಮಡಿ ಗೊಳಿಸಿದವು.
ಮೆರವಣಿಗೆ ಮುಗಿಸಿ ಲಿಂಗೈಕ್ಯ ಪಾರ್ಥಿವ ಶರೀರ ಲೋಚನೇಶ್ವರ ವಿರಕ್ತಮಠ ತಲುಪಿದ ಬಳಿಕ ವಿವಿಧ ಸ್ವಾಮಿಗಳ ನೇತೃತ್ವದಲ್ಲಿ ಶಾಸ್ತ್ರೋಕ್ತವಾಗಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಇದೇ ವೇಳೆ ನೂತನ ಪೀಠಾಧಿಪತಿಗೆ ರಾಚೋಟೇಶ್ವರ ದೇವರಿಗೆ ಲಿಂಗೈಕ್ಯ ರಾಚೋಟೇಶ್ವರ ಸ್ವಾಮಿಗಳ ಪಟಗಧಾರಣೆ ಮಾಡಲಾಯಿತು.
Kshetra Samachara
19/11/2021 11:55 am