ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ಭಕ್ತರ ಶ್ರದ್ಧೆ ಭಾವೈಕ್ಯತೆಯ ಒಗ್ಗಟ್ಟು ಹಳ್ಯಾಳದಲ್ಲಿ ನೆಲೆನಿಂತ ವೀರಭದ್ರೇಶ್ವರ

ಹುಬ್ಬಳ್ಳಿ : ಭಕ್ತರ ಇಚ್ಚೆ, ಸಾರ್ವಜನಿಕರ ಸಹಕಾರ, ಗ್ರಾಮದ ಜನರು ನಂಬಿಕೆ, ಮಹಿಳೆಯರು ಶ್ರದ್ಧಾ ಭಕ್ತಿಯ ಫಲವಾಗಿ ಹಳ್ಯಾಳ ಗ್ರಾಮದಲ್ಲಿ ವೀರಭದ್ರೇಶ್ವರ ಸ್ವಾಮಿ ಮಂಗಳವಾರ ನೆಲೆ ನಿಂತಿದ್ದಾನೆ.

ಹೌದು ! ಹುಬ್ಬಳ್ಳಿ ತಾಲೂಕಿನ ಹಳ್ಯಾಳ ಗ್ರಾಮದಲ್ಲಿ ನೂತನ ವೀರಭದ್ರೇಶ್ವರ ದೇವಸ್ಥಾನ ಲೋಕಾರ್ಪಣೆ ಹಾಗೂ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಅಭಿನವ ಕಲ್ಯಾಣಪುರ ಬಸವಣ್ಣನವರ ನೇತೃತ್ವದಲ್ಲಿ ಮಂಗಳವಾರ ಅತಿ ಅಚ್ಚುಕಟ್ಟಾಗಿ ನೆರವೇರಿತು.

ನೂತನ ದೇವಸ್ಥಾನದಲ್ಲಿ ಮಹಿಳೆಯರ ಕುಂಭ ಕೊಡ, ಗುಗ್ಗಳ ಮೆರವಣಿಗೆ, ವೀರಗಾಸೆ ಕಾರ್ಯಕ್ರಮ, ಡೊಳ್ಳು ಕುಣಿತದ ಮೂಲಕ ವೀರಭದ್ರೇಶ್ವರ ಮೂರ್ತಿಯನ್ನು ಗ್ರಾಮಕ್ಕೆ ಬರಮಾಡಿಕೊಂಡು ಮೂರ್ತಿ ಪ್ರತಿಷ್ಠಾಪನೆ ಮಾಡಲಾಯಿತು, ಬಳಿಕ ಗ್ರಾಮದಲ್ಲಿ ಅಭಿನವ ಕಲ್ಯಾಣಪುರ ಬಸವಣ್ಣನವರಿಂದ ಹಿತವಚನ ಕಾರ್ಯಕ್ರಮ ನಡೆಯಿತು.

ಸಮಾರಂಭದ ವೇದಿಕೆಯ ಮೇಲೆ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದ ನಂತರದಲ್ಲಿ ದೇವಸ್ಥಾನದ ಅಭಿವೃದ್ಧಿಗೆ ಶ್ರಮಿಸಿದ ಮುಖಂಡರನ್ನು ಸನ್ಮಾನಿಸಿ ಸ್ಮರಣಿಕೆ ನೀಡಿ ಗೌರವಿಸಿಲಾಯಿತು. ಗ್ರಾಮಕ್ಕೆ ಬಂದ ಭಕ್ತರಿಗಾಗಿ ಸತತ ಮೂರು ದಿನಗಳಿಂದ ಅನ್ನಪ್ರಸಾದ ಏರ್ಪಡಿಸಲಾಗಿತ್ತು. ದೇವಸ್ಥಾನದಲ್ಲಿನ ನವಗ್ರಹ ಪೂಜೆ ಈಶ್ವರನ ಪೂಜೆ ಭಕ್ತರ ಗಮನ ಸೆಳೆದವು.

Edited By : Nagesh Gaonkar
Kshetra Samachara

Kshetra Samachara

17/11/2021 07:55 pm

Cinque Terre

67.85 K

Cinque Terre

0

ಸಂಬಂಧಿತ ಸುದ್ದಿ