ಕುಂದಗೋಳ : ಪಟ್ಟಣದಲ್ಲಿ ನೆಲೆಸಿ ಬರೋಬ್ಬರಿ 250 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಗ್ರಾಮ ದೇವತೆ ದ್ಯಾಮವ್ವನಿಗೆ ಮಹಾನವಮಿ ಆಯುಧಪೂಜೆ ನಿಮಿತ್ತವಾಗಿ ಇಂದು ವಿಶೇಷ ಪೂಜೆ ನೆರವೇರಿದೆ.
ಈಗಾಗಲೇ ನವರಾತ್ರಿ ಅಂಗವಾಗಿ ಕಳೆದ ಏಳು ದಿನಗಳಿಂದ ಕುಂದಗೋಳ ಪಟ್ಟಣದ 24 ಭಜನಾ ಸಂಘದವರು ದಿನವು ದೇವಿ ಮಹಾತ್ಮೆ ಭಜನಾ ಪದ ಕೈಗೊಂಡಿದ್ದರು. ನಿತ್ಯ ಬೆಳಿಗ್ಗೆ ಸಾಯಂಕಾಲ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದು ಪುನೀತರಾಗಿದ್ದು ತಮ್ಮ ಬೇಡಿಕೆ ಈಡೇರಿಸಿದ ದೇವಿಗೆ ಹರಕೆ ಸಹ ಸಮರ್ಪಿಸಿದ್ದಾರೆ.
ಇಂದು ಮಹಾನವಮಿ ನಿಮಿತ್ತವಾಗಿ ದೇವಸ್ಥಾನಕ್ಕೆ ಮಹಿಳೆಯರು ಮಕ್ಕಳು ಆಗಮಿಸಿ ದೇವಿಯ ದರ್ಶನ ಪಡೆದು ಪುನೀತರಾದರಲ್ಲದೆ ಉಡಿ ಹಣ್ಣುಕಾಯಿ ಸೇವೆ ನೀಡಿ ಸುಖ ಶಾಂತಿ ನೆಮ್ಮದಿ ಮಳೆ ಬೆಳೆಗಾಗಿ ಪ್ರಾರ್ಥಿಸುತ್ತಿದ್ದಾರೆ. ಇನ್ನು ದೇವಸ್ಥಾನ ದೀಪಾಲಂಕಾರಗಳಿಂದ ಕಂಗೋಳಿಸುತ್ತಿದೆ.
Kshetra Samachara
14/10/2021 05:33 pm