ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಮೈಲಾರಲಿಂಗೇಶ್ವರ ಜಾತ್ರೆ ಯಶಸ್ವಿ ಮೂರು ಕಾರ್ಣೀಕದ ನುಡಿ

ಕುಂದಗೋಳ : ತಾಲೂಕಿನ ಬು.ಕೊಪ್ಪ ಗ್ರಾಮದ ಇತಿಹಾಸ ಪ್ರಸಿದ್ಧ ಮೈಲಾರಲಿಂಗೇಶ್ವರ ಜಾತ್ರಾ ಮಹೋತ್ಸವ ಹಾರಿ ಹತಾರ ಹತ್ತು ಶಸ್ತ್ರಾಸ್ತ್ರಗಳ ಪವಾಡಗಳ ರೋಮಾಂಚನದ ನಡುವೆ ಅದ್ಧೂರಿಯಾಗಿ ನೆರವೇರಿತು.

ಬೆಳಿಗ್ಗೆಯೇ ಮೈಲಾರಲಿಂಗೇಶ್ವರನಿಗೆ ಪೂಜೆ ಮಂತ್ರಾಭಿಷೇಕ ಗೈದು ಗ್ರಾಮದಲ್ಲೆಲ್ಲ ಮೈಲಾರಲಿಂಗೇಶ್ವರನ ರಥ ಹಾಗೂ ಪಲ್ಲಕ್ಕಿ ಮೆರವಣಿಗೆ ನಡೆಯಿತು. ಮೆರವಣಿಗೆ ಉದ್ದಕ್ಕೂ ಏಳು ಕೋಟಿ, ಏಳು ಕೋಟಿ ಎಂಬ ಘೋಷಣೆ ಜೊತೆ ಗೋರವಯ್ಯಗಳು ದಾರಿಯುದ್ದಕ್ಕೂ ಹೆಜ್ಜೆ ಹಾಕಿದರು.

ವಿವಿಧ ವಾದ್ಯ ಮೇಳಗಳ ಜೊತೆ ಸಮ್ಮುಖದಲ್ಲಿ ಮೈಲಾರಲಿಂಗೇಶ್ವರನ ಸನ್ನಿಧಿಯಲ್ಲಿ ನಡೆದ ಶಸ್ತ್ರಾಸ್ತ್ರಗಳ ಪವಾಡಗಳು ನೋಡುಗರನ್ನು ತನ್ಮಯ ಗೊಳಿಸಿದವು.ಬಳಿಕ ಮೂರು ಜನ ಗೋರವಯ್ಯ ವೇಷಧಾರಿಗಳು ಬಿಲ್ಲನ್ನೇರಿ ತಬ್ಬಲಿ ಆನಂದದ ಕಂಬಳಿ ಬಿಸಿತಲೇ ಪರಾಕ್,

ತಬ್ಬಲಿ ಶಿಶುವು ನಾಡೆಲ್ಲಾ ನೋಡಿ ನೋಡಿ ಆಡುತ್ತ ನಕ್ಕಿತಲೇ ಪರಾಕ್, ತಬ್ಬಲಿ ಮುತ್ತಿನ ಸರಪಳಿ ಆಕಾಶಕ್ಕೆ ಬಿದ್ದು ಮೂರು ತುಂಡಾದಿತಲೇ ಪರಾಕ್ ಎಂದು ಕಾರ್ಣೀಕ ನುಡಿದರು.

ಹಿರಿಯರು ಜಗತ್ತಿಗೆ ಶುಭಗಳಿಗೆ ಒದಗಲಿದೆ. ಕೊರೊನಾ ಮಾಯವಾಗಲಿದೆ. ಹಾಗೂ ಜಗತ್ತಿನ ಬೆಳೆಯುತ್ತಿರುವ ವಿದ್ಯಮಾನ ನೋಡಿ ಕೂಸು ಆಡುತ್ತ ನಗಲಿದೆ ಎಂದರೇ ಕೆಲವರು ಮುತ್ತಿನ ಸರಪಳಿ ಮೂರು ತುಂಡು ಎಂದರೇ ಮಳೆ ಬೆಳೆ ಬಗ್ಗೆ ವಿಚಾರಿಸಿದ್ರೇ ಇನ್ನು ಕೆಲವರು ರಾಜಕೀಯ ಬಗ್ಗೆ ಕಲ್ಪಿಸಿಕೊಂಡರು.

ಒಟ್ಟಾರೆ ಕುಂದಗೋಳ ತಾಲೂಕಿನಲ್ಲೇ ಶ್ರೇಷ್ಠವಾದ ಬು.ಕೊಪ್ಪ ಮೈಲಾರಲಿಂಗೇಶ್ವರನ ಜಾತ್ರೆ ಯಶಸ್ವಿಯಾಗಿದ್ದು ಸುತ್ತ ಮುತ್ತಲಿನ ಹಳ್ಳಿಗರು ದೇವರ ದರ್ಶನ ಪಡೆದು ಪ್ರಸಾದ ಸವಿದು ಪುನೀತರಾದರು.

Edited By : Manjunath H D
Kshetra Samachara

Kshetra Samachara

23/02/2021 04:54 pm

Cinque Terre

20.32 K

Cinque Terre

1

ಸಂಬಂಧಿತ ಸುದ್ದಿ