ಹುಬ್ಬಳ್ಳಿ: ಹೊಸ ವರ್ಷದ ಮೊದಲ ಹಬ್ಬ ಎಂದೇ ಹೆಸರಾಗಿರುವ ಮಕರ ಸಂಕ್ರಾಂತಿ ಹಬ್ಬದ ಕಳೆ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಮೊಳಕೆಯೊಡೆದಿದ್ದು,ಹುಬ್ಬಳ್ಳಿಯ ಪ್ರತಿಷ್ಠಿತ ಕೇಶ್ವಾಪೂರದ ಶಬರಿನಗರ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಹಮ್ಮಿಕೊಳ್ಳಲಾಗಿದೆ.
ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಜ.14 ರಂದು ಶಬರಿನಗರ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಪರಮ ಪೂಜ್ಯ ಶ್ರೀ ಕೆ.ಎಂ.ಮೋಹನ ಗುರುಸ್ವಾಮಿಗಳ ನೇತೃತ್ವದಲ್ಲಿ ಅಯ್ಯಪ್ಪ ಸ್ವಾಮಿಗೆ ವಿಶೇಷ ಪೂಜೆ ಪುನಸ್ಕಾರಗಳನ್ನು ಹಮ್ಮಿಕೊಳ್ಳಲಾಗಿದ್ದು, ಬೆಳಗ್ಗೆ 4-30 ಘಂಟೆಗೆ ಮಹಾ ಅಭಿಷೇಕ, ಸಂಜೆ 6-45 ಘಂಟೆಗೆ ಮಕರ ಜ್ಯೋತಿ ದರ್ಶನ ಹಾಗೂ 8-30 ಘಂಟೆಗೆ ಸಾರ್ವಜನಿಕ ಅನ್ನಸಂತರ್ಪಣೆ ಮಾಡಲಾಗುವುದು ಎಂದು ಧರ್ಮಧಿಕಾರಿಗಳದ ಕೆ.ಎಂ.ಮೋಹನ ಗುರುಸ್ವಾಮಿಯವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
Kshetra Samachara
13/01/2021 06:24 pm