ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ : ಚಾತುರ್ಮಾಸದ ಅಳ್ಳುನೂಫಿ ಕಾರ್ಯಕ್ರಮ ಭಗವಾನರಿಗೆ ಪಂಚಾಮೃತಾಭಿಷೇಕ

ಕಲಘಟಗಿ : ಚಾತುರ್ಮಾಸದ ನಿಮಿತ್ತವಾಗಿ ನಿರಂತರ ನಾಲ್ಕು ತಿಂಗಳ ಅಳ್ಳು ನೂಫಿಯ ವಿಸರ್ಜನಾ ಕಾರ್ಯಕ್ರಮವು ಕಲಘಟಗಿ ತಾಲೂಕಿನ ದ್ಯಾಮಾಪುರ ಗ್ರಾಮದ ಶ್ರೀ 1008 ಶಾಂತಿನಾಥ ಜೈನ್ ಮಂದಿರದಲ್ಲಿ ಶ್ರಾವಕಿಯರಿಂದ ನೆರವೇರಿತು.ಇಂದು ಬೆಳಿಗ್ಗೆ ಭಗವಾನ್ ಶಾಂತಿನಾಥ ತೀರ್ಥಂಕರರಿಗೆ ಪಂಚಾಮೃತ ಅಭಿಷೇಕ ಹಾಗೂ ಮಹಿಳೆಯರಿಂದ ಕುಂಭ ಕೋಡಗಳ ಮೆರವಣಿಗೆ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಸ್ಥಾನಿಕ ಪಂಡಿತರಾದ ಶ್ರೇಣಿಕ್ ಪಂಡಿತರು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಬಳಿಕ ಮಾತನಾಡಿದ ಅವರು ದೇಶ ರಾಜ್ಯಕ್ಕೆ ಸುಖ ಶಾಂತಿ ನೆಮ್ಮದಿ ಸಿಗಲೇಂದು ಈ ಪೂಜಾ ಕಾರ್ಯಕ್ರಮ ನಡೆಸಲಾಗಿದೆ ಎಂದರು.

ಈ ಧಾರ್ಮಿಕ ಪೂಜೆಯಲ್ಲಿ ಜೈನ ಧರ್ಮದ ಶ್ರಾವಕ ಶ್ರಾವಕಿಯರು ಸುತ್ತ ಮುತ್ತಲಿನ ಗ್ರಾಮದ ಹಿರಿಯರು ಭಾಗವಹಿಸಿ ಭಗವಾನರ ಕೃಪಾ ಆರ್ಶಿವಾದ ಪಡೆದುಕೊಂಡರು.

Edited By : Manjunath H D
Kshetra Samachara

Kshetra Samachara

29/11/2020 12:40 pm

Cinque Terre

29.46 K

Cinque Terre

0

ಸಂಬಂಧಿತ ಸುದ್ದಿ