ಪಬ್ಲಿಕ್ ನೆಕ್ಸ್ಟ್ ವಿಶೇಷ : ಮಲ್ಲಿಕಾರ್ಜುನ ಪುರದನಗೌಡರ
ಕಲಘಟಗಿ: ಕೃಷಿಯಿಂದ ವಿಮುಖರಾಗಿ ನಗರಗಳತ್ತ ಮುಖ ಮಾಡುವ ಯುವಕರಿಗೆ ಮಾದರಿಯಾಗುವ ರೀತಿಯಲ್ಲಿ ನಗರದಿಂದ ಹಳ್ಳಿಗೆ ಬಂದು ಎಲ್ಲರೂ ಬೆರಗಾಗುವಂತೆ ಸ್ಟ್ರಾಬೆರಿ ಬೆಳೆದ ದಂಪತಿಯ ಯಶೋಗಾಥೆ ಇದು.
ಇದೇನಪ್ಪ ಅಂತಹ ಯಶೋಗಾಥೆ ! ಎಂದಿರಾ ಹಾಗಾದರೇ,ಈ ಸ್ಟೋರಿ ನೋಡೋಣ ಬನ್ನಿ ! ಕಲಘಟಗಿ ತಾಲೂಕಿನ ಹುಲ್ಲಂಬಿಯಲ್ಲಿ ಸ್ಟ್ರಾಬೆರಿ ಬೆಳೆ ಬೆಳೆದು ಕೈತುಂಬ ಸಂಪಾದನೆ ಮಾಡುವ ಮೂಲಕ ಇತರೆ ರೈತರಿಗೆ ಶಶಿಧರ ಗೊರವರ ಹಾಗೂ ಅವರ ಪತ್ನಿ ಜ್ಯೋತಿ ಗೊರವರ ಮಾದರಿಯಾಗಿದ್ದಾರೆ.
ಮೂಲತಃ ಗುತ್ತಿಗೆದಾರರಾಗಿರುವ ಶಶಿಧರ ಗೊರವರ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಮೊಟ್ಟೆಬೆನ್ನೂರಿನವರು.ಎಸ್ ಎಸ್ ಎಲ್ ಸಿ ಮುಗಿಸಿ ಕೆಲಸಕ್ಕಾಗಿ ಮಹಾರಾಷ್ಟ್ರದ ಮಹಾಬಲೇಶ್ವರಕ್ಕೆ ತೆರಳಿ,22 ವರ್ಷಗಳ ಕಾಲ ಗುತ್ತಿಗೆದಾರರಾಗಿ ಕೆಲಸ ಡಿ,ಮಹಾಬಲೇಶ್ವರದಲ್ಲಿ ಹೆಚ್ಚಾಗಿ ಬೆಳೆಯುವ ಸ್ಟ್ರಾಬೆರಿ ಮಾಹಿತಿ ಪಡೆದು,ಉತ್ಸುಕರಾಗಿ ಹುಲ್ಲಂಬಿಗೆ ಆಗಮಿಸಿ, ಒಂದಷ್ಟು ಜಮೀನು ಬಾಡಿಗೆ ಪಡೆದು ನಳನಳಿಸುವ ಸ್ಟ್ರಾಬೆರಿ ಬೆಳೆಯುತ್ತಿದ್ದಾರೆ.
ಕ್ಯಾಲಿಪೋರ್ನಿಯಾ ದೇಶದಿಂದ ಸ್ಟ್ರಾಬೆರಿ ಸಸಿಗಳನ್ನು ತರಸಿ ಸಾವಯವ ಗೊಬ್ಬರ ಬಳಸಿ,ಇಸ್ರೇಲ್ ಮಾದರಿಯ ನೀರಾವರಿ ಪದ್ಧತಿಯ ಮೂಲಕ ಸ್ಟ್ರಾಬೆರಿ ಬೆಳೆ ಬೆಳೆಯುತ್ತಿದ್ದಾರೆ.ಪ್ರತಿನಿತ್ಯವೂ 40 ರಿಂದ 50 ಕೆಜಿ ಸ್ಟ್ರಾಬೆರಿ ಕಟಾವು ಮಾಡಿ ಪ್ಲಾಸ್ಟಿ ಬಾಕ್ಸ್ ಗಳಲ್ಲಿ ಹಾಕಿ ಹುಬ್ಬಳ್ಳಿ ,ಬೆಂಗಳೂರು,ಗೋವಾ,ಹೈದರಾಬಾದ್ ಮಾರುಕಟ್ಟೆಗಳಲ್ಲಿ ಮಾರಾಟ ಮಾಡುವ ಮೂಲಕ ಉತ್ತಮ ಸಂಪಾದನೆ ಕಂಡುಕೊಂಡಿದ್ದಾರೆ.ಮಕ್ಕಳಾದ ಧೀರಜ್,ಸೂರಜ್ ಸಹ ಸ್ಟ್ರಾಬೆರಿ ಬೆಳೆಯಲು ಸಹಾಯ ಮಾಡುವ ಮೂಲಕ ಕೃಷಿ ಅನುಭವ ಪಡೆಯುತ್ತಿದ್ದಾರೆ.
ಲಾಕ್ ಡೌನ್ ನಂತರ ಸ್ಟ್ರಾಬೆರಿಗೆ ಬೇಡಿಕೆ ಹೆಚ್ಚಾಗಿದ್ದು,ಒಂದು ಎಕರೆಗೆ 6 ರಿಂದ 8 ಲಕ್ಷ ರೂಪಾಯಿ ವರೆಗೂ ಸಂಪಾದನೆ ಮಾಡಬಹುದು ಎಂದು ವಿಶ್ವಾಸದಿಂದ ನುಡಿಯುತ್ತಾರೆ ಶಶಿಧರ ಗೊರವರ ದಂಪತಿ.
ಸ್ಟ್ರಾ ಬೆರಿ,ರಸ್ ಬೆರಿ,ಗೋಲ್ಡನ್ ಬೆರಿ,ಮಲ್ಬೆರಿ ಹಾಗೂ ಇದರ ಜೊತೆಗೆ ಚರಿ,ಜೂಕಿನಿ,ಅರಿಸಿಣ,ಅಶ್ವಗಂಧ,ಮೆಣಸಿನಕಾಯಿ,ಟೊಮ್ಯಾಟೊ ಬೆಳೆಗಳನ್ನು ಬೆಳೆದು ಕೃಷಿ ಎಂದರೆ ಖುಷಿ ಎನ್ನುವಂತೆ ದುಡಿಮೆ ಮಾಡುವ ಶಶಿಧರ ದಂಪತಿ ಪ್ರಗತಿಪರ ಕೃಷಿಕರಾಗಿದ್ದಾರೆ.
Kshetra Samachara
23/11/2020 05:39 pm