ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಬ್ರಿಟಿಷರಿಗೆ ಸಂಗೀತದ ಶಕ್ತಿಯನ್ನು ಪರಿಚಯಿಸಿದ್ದು ಸವಾಯಿ ಗಂಧರ್ವರು; ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ

ಧಾರವಾಡ ಜಿಲ್ಲೆಯು ಸಾಹಿತ್ಯದ ತವರರೂ. ಇಲ್ಲಿ ಇಬ್ಬರೂ ಗಂಧರ್ವರು ಹುಟ್ಟಿರುವುದು ನಿಜಕ್ಕೂ ವಿಶೇಷವಾಗಿದೆ. ಅಲ್ಲದೇ ಕೇಂದ್ರ ಸರ್ಕಾರ ಕೂಡ ನಮ್ಮವರನ್ನು ಗುರುತಿಸುವ ಹಾಗೂ ಅವರ ಸಾಧನೆಯನ್ನು ಸ್ಮರಿಸುವ ಕಾರ್ಯವನ್ನು ಮಾಡುತ್ತಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಹೇಳಿದರು.

ನಗರದಲ್ಲಿಂದು ಸವಾಯಿ ಗಂಧರ್ವರ ಅಂಚೆ ಚೀಟಿ ಬಿಡುಗಡೆಗೊಳಿಸಿ ಕನ್ನಡದಲ್ಲೇ ಭಾಷಣ ಆರಂಭಿಸಿದ ಅವರು, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಬಗ್ಗೆ ಮಾತನಾಡುವುದು ನಮ್ಮ ಸೌಭಾಗ್ಯ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನನ್ನ ಗುರು. ಪಾರ್ಲಿಮೆಂಟ್ ನಡಾವಳಿ ಬಗ್ಗೆ ಜೋಶಿ ನನಗೆ ಕಲಿಸಿಕೊಟ್ಟಿದ್ದಾರೆ. ಲೋಕಸಭೆಯಲ್ಲಿ ಪ್ರತಿಯೊಂದು ಹೆಜ್ಜೆ, ಭಾಷಣ ಮಾಡೋದನ್ನು ಪ್ರಹ್ಲಾದ್ ಜೋಶಿ ಕಲಿಸಿದ್ದಾರೆ. ಅಧಿಕಾರ, ಸ್ಥಾನ ಬಂದನಂತರ ಮನುಷ್ಯ ಬದಲಾಗುತ್ತಾನೆ. ಆದರೆ ವಿರೋಧ ಪಕ್ಷದ ನಾಯಕರೂ ಪ್ರಹ್ಲಾದ್ ಜೋಶಿ ಅವರನ್ನು ಗೌರವಿಸುತ್ತಾರೆ ಎಂದರು.

ನಮ್ಮ ಗುಲಾಮ ಸಂಸ್ಕೃತಿಯಿಂದ ಹೊರ ಬರಬೇಕೆಂದು ಪ್ರಧಾನಿ ಹೇಳಿದ್ದರು‌. ಅದೇ ತರನಾಗಿ ಪ್ರಧಾನಿ ದೇಶವನ್ನು ಮುನ್ನಡೆಸುತ್ತಿದ್ದಾರೆ. ಪ್ರಧಾನಿ ಬಂದ ನಂತರ ಅನೇಕ ಸರ್ಕಾರದ ಶಿಷ್ಟಾಚಾರಕ್ಕೆ ಬ್ರೇಕ್ ಹಾಕಿದ್ದಾರೆ. ಸಮಾಜ, ಸಂಸ್ಕೃತಿಗೆ ಅನೇಕ ಮಹನೀಯರ ಕೊಡುಗೆ ಇದೆ. ಅಂಥವರನ್ನು ಗುರುತಿಸುವ ಕೆಲಸ ಮೋದಿ ಮಾಡ್ತಿದ್ದಾರೆ. ಪಂ. ಕುಮಾರ ಗಂಧರ್ವರ ಸಂಗೀತವನ್ನು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಇಷ್ಟಪಡುತ್ತಿದ್ದರು. ಬ್ರಿಟಿಷ್ ಗವರ್ನರ್ ಎದುರು ಸವಾಯಿ ಗಂಧರ್ವರು ಸತತ ಮೂರು ಗಂಟೆ ಸಂಗೀತ ಕಚೇರಿ ನೀಡಿದ್ದರು. ಸಂಗೀತ ಕೇಳಿದ ಎಲ್ಲ ಜನ ಮಂತ್ರ ಮುಗ್ಧರಾಗಿದ್ದರು. ಮೂರು ಗಂಟೆಗಳ ಬಳಿಕ ಗವರ್ನರ್ ಎದ್ದು ಗೌರವ ಸಲ್ಲಿಸಿದ್ರು ಎಂದು ಅವರು ಹೇಳಿದರು.

ಸಂಗೀತಕ್ಕಿರುವ ಶಕ್ತಿಯನ್ನು ಸವಾಯಿ ಗಂಧರ್ವರು ಬ್ರಿಟಿಷರಿಗೆ ಪರಿಚಯಿಸಿದ್ದರು. ಕಲೆ, ಸಂಸ್ಕೃತಿ, ಶಿಕ್ಷಣದಿಂದ ಸವಾಯಿ ಗಂಧರ್ವರು ಪರಿಪೂರ್ಣರು. ಡಾ.ಗಂಗೂಬಾಯಿ ಹಾನಗಲ್ ಹಾಗೂ ಪಂ.ಭೀಮಸೇನ ಜೋಶಿಯಂತಹ ಶಿಷ್ಯರನ್ನು ನಾಡಿಗೆ ಕೊಟ್ಟಿದ್ದೇ ಸವಾಯಿ ಗಂಧರ್ವರು ಎಂದು ಅವರು ಅಭಿನಂದನೆ ಸಲ್ಲಿಸಿದರು.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

11/10/2022 03:25 pm

Cinque Terre

43.2 K

Cinque Terre

0

ಸಂಬಂಧಿತ ಸುದ್ದಿ