ಹುಬ್ಬಳ್ಳಿ ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿಯ ಮೇಲೆ ಓಡಾಟ ನಡೆಸುತ್ತಿರುವ ಟಿಪ್ಪರ್ / ಲಾರಿಗಳ ವೇಗಕ್ಕೆ ಮೀತಿ ಇಲ್ಲಾ ಎಂಬ ಆಕ್ರೋಶದ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದ್ದು ಇದಕ್ಕೆ ಹುಬ್ಬಳ್ಳಿ ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿಯಲ್ಲಿ ಸಂಭವಿಸುತ್ತಿರುವ ಅಪಘಾತಗಳೇ ಮುಖ್ಯ ಕಾರಣ ಆಗಿವೆ.
ಹೌದು ! ಹುಬ್ಬಳ್ಳಿಯಿಂದ ಕುಂದಗೋಳ ಮಾರ್ಗವಾಗಿ ಲಕ್ಷ್ಮೇಶ್ವರ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ನಿತ್ಯ ಉಸುಕು, ಕಡಿ, ಸಿಮೇಂಟ್ ಸೇರಿದಂತೆ ನಾನಾ ಸರಕು ಸಾಗಾಟ ಮಾಡುವ ಟಿಪ್ಪರ್ ಹಾಗೂ ಮಣ್ಣು, ಕಲ್ಲು, ವೇಸ್ಟ್ ಸಾಗಿಸುವ ಲಾರಿ ಚಾಲಕರು ಹೆದ್ದಾರಿ ನಿಯಮ ಮೀರಿ ವಾಹನ ಓಡಿಸುತ್ತಲಿರುವ ಹಿನ್ನೆಲೆಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚುತ್ತವೆ ಎಂಬ ಆಕ್ಷೇಪ ವ್ಯಕ್ತವಾಗಿದೆ.
ಇದಕ್ಕೆ ಸಾಕ್ಷಿ ಎಂಬಂತೆ ಕಳೆದ ಹಲವಾರು ದಿನಗಳ ಹಿಂದೆ ಟಿಪ್ಪರ್ ಲಾರಿ ಕೆಳಗೆ ಸಿಕ್ಕ ಸಂಶಿ ವ್ಯಕ್ತಿ ದುರ್ಮರಣದ ಅಪಘಾತ ಮತ್ತು ಮೊನ್ನೆಯಷ್ಟೇ ರಾಜ್ಯ ಹೆದ್ದಾರಿಯ ಬಳಿ ಟಿಪ್ಪರ್ ಹಾಗೂ ಬೈಕ್ ಟಿಪ್ಪರ್ ಮದ್ಯದ ಅಪಘಾತದಲ್ಲಿ ಸ್ಥಳದಲ್ಲೇ ಬೈಕ್ ಚಾಲಕ ಪ್ರಾಣ ಬಿಟ್ಟ ಅವಘಡ ಸೇರಿ ಹಲವಾರು ರಸ್ತೆ ಅಪಘಾತ ಸಂಚಾರಿಗಳಲ್ಲಿ ಭಯ ತಂದಿವೆ.
ಒಂದೆಡೆ ನಿಗದಿತ ಸಾಮರ್ಥ್ಯಕ್ಕಿಂತ ಹೆಚ್ಚಿನ ಲೋಡ್ ತುಂಬುವ ಟಿಪ್ಪರ್ ವಾಹನ ಸವಾರರು ಮದ್ಯ ಸೇವಿಸಿ ಜೋರಾಗಿ ವಾಹನ ಓಡಿಸುತ್ತಾರೆ ಎಂಬ ಆರೋಪ, ಅತಿಯಾದ ಮ್ಯೂಸಿಕ್ ಹಾಡು ಕೇಳುತ್ತಾ ಲಾರಿ ಚಲಾಯಿಸುವ ಆರೋಪ, ವಾಹನ ಚಾಲನೆ ವೇಳೆ ಮೊಬೈಲ್ ಬಳಕೆ ಆರೋಪ ಸೇರಿದಂತೆ ಲೈಸೆನ್ಸ್, ಸರಕು ಸಾಗಾಟಕ್ಕೆ ಪರವಾನಗಿ, ಸೇರಿದಂತೆ ಹಲವಾರು ಹೆದ್ದಾರಿ ಮಾನದಂಡಗಳನ್ನು ಟಿಪ್ಪರ್ ಲಾರಿ ಚಾಲಕರು ಮರೆತಿದ್ದಾರೆ ಎಂದು ಸ್ವತಃ ಜನರೇ ಹೇಳ್ತಾ ಇದ್ದಾರೆ.
ನಿತ್ಯ ಹಗಲು ರಾತ್ರಿ ಎನ್ನದೇ ರಾಜ್ಯ ಹೆದ್ದಾರಿ ಅಷ್ಟೇ ಅಲ್ಲದೇ ಪಟ್ಟಣದ ಒಳಗೆ ನುಗ್ಗಿ ಹಳ್ಳಿ ರಸ್ತೆಗಳಿಗೆ ನುಗ್ಗುವ ಟಿಪ್ಪರ್ / ಲಾರಿ ಚಾಲಕರು ಲೈಟ್ ಮೋಟಾರ್ ವಾಹನಗಳಿಗೆ ಸುತಾರಾಂ ಜಾಗ ಕೊಡದೆ ಸಾರಿಗೆ ಬಸ್ ಓವರಟೆಕ್ ಮಾಡುವ ದುಸ್ಸಾಹಸ ಮಾಡುತ್ತಾರೆ ಎಂಬುದಕ್ಕೆ ಪುರಾವೆ ಬೇಕಿಲ್ಲಾ ಬಿಡಿ.
ಈ ಬಗ್ಗೆ ಸಂಬಂಧಪಟ್ಟ ಕುಂದಗೋಳ ಗ್ರಾಮೀಣ ಪೊಲೀಸರು ಕ್ರಮ ಕೈಗೊಂಡು ಟಿಪ್ಪರ್ / ಲಾರಿಗಳ ವೇಗಕ್ಕೆ ಬ್ರೇಕ್ ಹಾಕಿ ಮಾನದಂಡಗಳನ್ನು ಪರಿಶೀಲನೆ ಮಾಡಿ ಎಂಬುದು ಜನಾಭಿಪ್ರಾಯ.
ಪಬ್ಲಿಕ್ ನೆಕ್ಸ್ಟ್ ಸ್ಪೇಶಲ್ ಬ್ಯುರೋ, ಶ್ರೀಧರ್ ಪೂಜಾರ್
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
22/09/2022 08:03 pm