ಹುಬ್ಬಳ್ಳಿ: ಇಲ್ಲಿಯ ಬಮ್ಮಾಪುರ ಬಣಗಾರ ಓಣಿಯ ಶ್ರೀ ವೀರಭದ್ರೇಶ್ವರ ದೇವಸ್ಥಾನ, ಪಂಚ ಕಮಿಟಿ ಆಶ್ರಯದಲ್ಲಿ ವೀರಭದ್ರೇಶ್ವರ ಹಾಗೂ ಬಸವಣ್ಣ ದೇವರ ನೂತನ ಮೂರ್ತಿ ಪ್ರತಿಷ್ಠಾಪನೆ ಸಮಾರಂಭದ ಅಂಗವಾಗಿ ನಗರದಲ್ಲಿ ಭವ್ಯ ಮೆರವಣಿಗೆ ನಡೆಯಿತು.
ದೇಸಾಯಿ ಓಣಿಯ ಶೀಶೈಲ ಮಠದಿಂದ ಆರಂಭವಾದ ಮೆರವಣಿಗೆಯಲ್ಲಿ ಸುಮಂಗಲೆಯರು ಪೂರ್ಣಕುಂಭ ಹೊತ್ತು ಸಾಗಿದರು. ಪುರವಂತರು ಹಾಗೂ ಹಾವೇರಿಯ ನಂದಿಕೋಲ ಸಕಲ ವಾದ್ಯ ಮೇಳಗಳ ಕಲಾವಿದರು ಮೆರವಣಿಗೆಗೆ ಮೆರುಗು ತಂದರು.
ಶ್ರೀಮದ್ವೀರಶೈವ ಸಂಸ್ಥೆ ಅಧ್ಯಕ್ಷ ಪ್ರಕಾಶ ಬೆಂಡಿಗೇರಿ, ಮಹಾನಗರ ಪಾಲಿಕೆ ಸದಸ್ಯ ಶಿವು ಮೆಣಸಿನಕಾಯಿ, ಶಂಕ್ರಪ್ಪ, ಗುಡ್ಡದ, ಬಸಣ್ಣ ಕಡೇಮನಿ, ಗಂಗಾಧರಯ್ಯ ಹಿರೇಮಠ, ಚನ್ನಬಸವ ಕಡೇಮನಿ, ಮಲ್ಲಿಕಾರ್ಜುನ ಸಿರಗುಪ್ಪ, ಶಂಭು ಲಕ್ಷೇಶ್ವರಮಠ ಇತರರು ನೇತೃತ್ವ ವಹಿಸಿದ್ದರು.
Kshetra Samachara
13/11/2021 11:46 am