ಧಾರವಾಡ: ಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರ ಸಂಕಲ್ಪ ಯಾತ್ರೆಯನ್ನು ಹಮ್ಮಿಕೊಂಡಿದ್ದು, ಈ ಯಾತ್ರೆಯ ನೇತೃತ್ವ ವಹಿಸಿರುವ ಬಿಜೆಪಿ ರಾಜ್ಯ ಅಧ್ಯಕ್ಷ ನಳೀನ್ ಕುಮಾರ್ ಕಟೀಲ ಅವರು ಗುರುವಾರ ಧಾರವಾಡಕ್ಕೆ ಆಗಮಿಸಿದ್ದಾರೆ.
ಧಾರವಾಡದ ಲಕ್ಷ್ಮೀಸಿಂಗನಕೇರಿಗೆ ಆಗಮಿಸಿದ ಕಟೀಲ್ ಅವರಿಗೆ ಅದ್ಧೂರಿ ಸ್ವಾಗತ ದೊರೆಯಿತು. ಇವರಿಗೆ ಶಾಸಕ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ ಸೇರಿದಂತೆ ಅನೇಕ ಮುಖಂಡರು ಸಾಥ್ ನೀಡಿದರು. ಮಹಿಳೆಯರು ನಾಯಕರಿಗೆ ಆರತಿ ಬೆಳಗಿ ಸ್ವಾಗತಿಸಿದರು.
ಲಕ್ಷ್ಮಿಸಿಂಗನಕೇರಿ ಸಿದ್ಧರಾಮೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಕಟೀಲ, ಸಿದ್ಧರಾಮೇಶ್ವರರ ದರ್ಶನ ಪಡೆದರು. ನಂತರ ಅಲ್ಲಿಂದ ಭಾರತಾಂಬೆಯ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಅಲ್ಲಿಂದ ಮದುಕೇಶ್ವರ ವಡ್ಡಿನ ಕಲ್ಯಾಣಮಂಟಪಕ್ಕೆ ಸಮಾವೇಶಕ್ಕೆ ತೆರಳಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
13/10/2022 12:38 pm