ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ರೈಲ್ವೆ ಸಚಿವರ ಬಗ್ಗೆ ಭರವಸೆ ಮಾತುಗಳನ್ನಾಡಿದ ಜೋಶಿ: ಬೇಡಿಕೆಯಿಟ್ಟು ಮನವಿ ಮಾಡಿದ ಕೇಂದ್ರ ಸಚಿವ

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ನೈಋತ್ಯ ರೈಲ್ವೇ ವಲಯದಲ್ಲಿ ಮೂರನೇ ಮುಖ್ಯ ದ್ವಾರ ಉದ್ಘಾಟನೆ ಆಗಿರುವುದು ನಮಗೆ ಬಹಳ ಸಂತೋಷವಾಗಿದೆ. ದ್ವೀತಿಯ ದರ್ಜೆ ನಗರದಲ್ಲಿ ಮೂರನೇ ದ್ವಾರ ಇರುವುದು ಕೇವಲ ಹುಬ್ಬಳ್ಳಿಯಲ್ಲಿ ಮಾತ್ರ. ಸಿದ್ದಾರೂಢರ ಹೆಸರನ್ನು ಇಡುವ ಬಗ್ಗೆ ಮೊದಲು ಚರ್ಚೆಯಾಗಿತ್ತು. ದಿವಂಗತ ಸುರೇಶ್ ಅಂಗಡಿ ಅವರು ಮುತುವರ್ಜಿ ವಹಿಸಿ ಸಿದ್ದಾರೂಢರ ಹೆಸರು ನಾಮಕಾರಣ ಮಾಡಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ನಗರದಲ್ಲಿಂದು ರೈಲ್ವೆ ಮೂರನೇ ದ್ವಾರ ಲೋಕಾರ್ಪಣೆ ಬಳಿಕ ಮಾತನಾಡಿದ ಅವರು, ಸಿದ್ಧಾರೂಢರು ಸರ್ವಧರ್ಮದ ಗುರುಗಳಾಗಿದ್ದರು. ಹೀಗಾಗಿ ಸೆಕ್ಯೂಲರ್ ಎನ್ನುವ ಪದ ಬರಲಿಲ್ಲ. ಇಲ್ಲದಿದ್ದರೆ ಆ ಪದ ಇಲ್ಲಿ ಹುಡುಕೋ ಸಾಧ್ಯತೆ ಇತ್ತು. ವಿಶ್ವದ ಅತೀ ಉದ್ದದ ರೈಲ್ವೆ ಪ್ಲಾಟ್ ಫಾರ್ಮ್ ಹೊಂದಿರುವ ಕೀರ್ತಿ ಹುಬ್ಬಳ್ಳಿ ರೈಲ್ವೆ ನಿಲ್ದಾಣಕ್ಕಿದೆ ಎಂದರು.

ಪ್ರಧಾನಿ ಮೋದಿ ಅವರನ್ನು ಡಿಸೆಂಬರ್ ತಿಂಗಳಲ್ಲಿ IIT ಉದ್ಘಾಟನೆಗೆ ಬರುವಂತೆ ವಿನಂತಿಸಿದ್ದೇನೆ. ಅಶ್ವಿನಿ ವೈಷ್ಣವ್ ಅವರು ಗೋಲ್ಡ್ ಮೆಡೆಲ್ ಪಡೆದವರು. ರಾಜಕಾರಣಿ ಅಂದರೆ ಬುದ್ಧಿ ಇಲ್ಲದವರು ಅಂದುಕೊಳ್ಳುತ್ತಾರೆ. ಆದರೆ ಅಶ್ವಿನಿ ಅವರು ಇಂಜಿನೀಯರಿಂಗ್‌ನಲ್ಲಿ ಗೋಲ್ಡ್ ಮೆಡಲಿಸ್ಟ್. ಅಶ್ವಿನಿ ವೈಷ್ಣವ್ ಎರಡು ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿದ್ದಾರೆ. ಇದೀಗ ಮಂತ್ರಿಯಾಗಿ ಜನರಿಗೆ ಹತ್ತಿರವಾಗಿದ್ದಾರೆ ಎಂದು ಜೋಶಿ ಹೇಳಿದರು. ಇದೀಗ ಭಾರತದಲ್ಲಿ ರೈಲ್ವೆ ಪ್ರಗತಿ ಸಾಧಿಸಿದೆ. ಹುಬ್ಬಳ್ಳಿಯಂದ ವಾರಣಾಸಿಗೆ ಇನ್ಮುಂದೆ ವಾರಕ್ಕೆ ಎರಡು ರೈಲ್ವೆ ಹೋಗಲಿವೆ. ಅಲ್ಲದೇ ಬಹುತೇಕ ಬೇಡಿಕೆಗಳನ್ನು ಸಚಿವರ ಮುಂದಿಟ್ಟಿದ್ದೇವೆ ಕೂಡಲೇ ಬಗೆಹರಿಸುವ ಬಗ್ಗೆ ಭರವಸೆ ಇದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

Edited By : Nagesh Gaonkar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

11/10/2022 09:35 pm

Cinque Terre

60.24 K

Cinque Terre

3

ಸಂಬಂಧಿತ ಸುದ್ದಿ