ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕರ್ನಾಟಕದ ರೈಲ್ವೆ ಅಭಿವೃದ್ಧಿಗೆ ನರೇಂದ್ರ ಮೋದಿ, ಜೋಶಿ ಕೊಡುಗೆ ಅಪಾರ; ಅಶ್ವಿನಿ ವೈಷ್ಣವ

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿ ಪವರಪುಲ್ ನೆಲ. ಇಲ್ಲಿನ ಆರಾಧ್ಯದೈವ ಸಿದ್ದಾರೂಢರಿಗೆ ಭಕ್ತಿಪೂರ್ವ ಪ್ರಣಾಮಗಳು. ಹುಬ್ಬಳ್ಳಿಯನ್ನು ನೋಡಿದಾಕ್ಷಣ ಏನೋ ಒಂಥರಾ ಮನಸ್ಸಿಗೆ ಖುಷಿ ಅನುಭವ ಬರುತ್ತಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಹುಬ್ಬಳ್ಳಿಯ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿದರು.

ರೈಲ್ವೆ ಮೂರನೇ ದ್ವಾರ ಲೋಕಾರ್ಪಣೆ ಬಳಿಕ ಮಾತನಾಡಿದ ಅವರು, ದೇಶದ ಆರ್ಥಿಕತೆಯ ವೃದ್ಧಿಯಲ್ಲಿ ಜೋಶಿ ಹಾಗೂ ಪ್ರಧಾನಮಂತ್ರಿ ಕೊಡುಗೆ ಮಹತ್ವದ್ದಾಗಿದೆ. ಈಗಾಗಲೇ ಈ ಭಾಗದಲ್ಲಿ ವಾರಣಾಸಿಗೆ ರೈಲು ಪ್ರಯಾಣಕ್ಕೆ ಬಹಳಷ್ಟು ಬೇಡಿಕೆ ಇದೆ ಈ ನಿಟ್ಟಿನಲ್ಲಿ ವಾರಣಾಸಿಗೆ ಆದಷ್ಟು ಬೇಗ ರೈಲು ಬಿಡುವ ಭರವಸೆ ನೀಡಿದರು.

ಕರ್ನಾಟಕ ಅಭಿವೃದ್ಧಿಗೆ ಮೋದಿ ಸಾಕಷ್ಟು ಅನುದಾನ ಕೊಟ್ಟಿದ್ದಾರೆ. ರೈಲ್ವೆಗೆ ಮೊದಲು ಕರ್ನಾಟಕಕ್ಕೆ 830 ಕೋಟಿ ಅನುದಾನ ಬರುತ್ತಿತ್ತು. ಇದರಿಂದ ಏನು ಆಗುತ್ತಿರಲಿಲ್ಲ. ‌ಮೀಟರ್ ಗೇಜ್ ನಿಂದ ಬ್ರಾಡ್ ಗೇಜ್ ಮಾಡಲು 20 ವರ್ಷ ಹಿಡಿದಿದೆ. ಆದರೇ ಮೋದಿ ಬಂದ ಮೇಲೆ ದೇಶದ ವರ್ತಮಾನ ಬದಲಾಗಿದೆ. 6000 ಕೋಟಿ ರೈಲ್ವೆ ಅಭಿವೃದ್ಧಿಗೆ ಕೊಟ್ಟಿದ್ದಾರೆ. ಭೂಸ್ವಾಧೀನ ಹಾಗೂ ಹೊಸ ಮಾರ್ಗ ಅನುಷ್ಠಾನಕ್ಕೆ ಚಾಲನೆ ನೀಡಲಾಗಿದೆ ಎಂದರು.

Edited By : Nagesh Gaonkar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

11/10/2022 09:02 pm

Cinque Terre

133.46 K

Cinque Terre

6

ಸಂಬಂಧಿತ ಸುದ್ದಿ