ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ನಿಜಾಮುದ್ದೀನ್ ಎಕ್ಸ್‌ಪ್ರೆಸ್‌ ರೈಲಿಗೆ ಸವಾಯಿ ಗಂಧರ್ವರ ಹೆಸರಿಡಲು ಜೋಶಿ ಮನವಿ

ಧಾರವಾಡ: ಹಜರತ್ ನಿಜಾಮುದ್ದೀನ್ ಎಕ್ಸ್‌ಪ್ರೆಸ್ ರೈಲಿಗೆ ಸವಾಯಿ ಗಂಧರ್ವ ಎಕ್ಸ್‌ಪ್ರೆಸ್ ರೈಲು ಎಂದು ಮರು ನಾಮಕರಣ ಮಾಡುವಂತೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಕೇಂದ್ರ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವಿ ಅವರಿಗೆ ಮನವಿ ಮಾಡಿದರು.

ಮೇಲ್ದರ್ಜೆಗೇರಿದ ಧಾರವಾಡದ ರೈಲು ನಿಲ್ದಾಣದ ಉದ್ಘಾಟನೆಗೆ ಬಂದಿದ್ದ ರೈಲ್ವೆ ಖಾತೆ ಸಚಿವ ಅಶ್ವಿನಿ ಅವರಿಗೆ ಜೋಶಿ ಅವರು ವೇದಿಕೆಯಲ್ಲೇ ಈ ಮನವಿ ಮಾಡಿದರು.

ವಾರಣಾಸಿಗೆ ಒಂದು ವಾರಕ್ಕೆ ಒಂದು ರೈಲು ಮಾತ್ರ ಹೋಗುತ್ತದೆ. ಅದನ್ನು ವಾರದಲ್ಲಿ ಎರಡು ಬಾರಿ ಬಿಡಬೇಕು. ಅಲ್ಲದೇ ವಂದೇ ಭಾರತ ರೈಲನ್ನು ಧಾರವಾಡದಿಂದ ಬೆಂಗಳೂರಿಗೆ ಹೊಸದಾಗಿ ಬಿಡಬೇಕು ಎಂದು ಜೋಶಿ ಮನವಿ ಮಾಡಿದರು. ತಪೋವನ ಬಳಿಯ ರೈಲ್ವೆ ಬ್ರಿಜ್‌ನ್ನೂ ಮೇಲ್ದರ್ಜೆಗೇರಿಸಲು ಅನುದಾನ ಬಿಡುಗಡೆ ಮಾಡುವಂತೆಯೂ ಜೋಶಿ ಮನವಿ ಮಾಡಿದರು.

ಅಶ್ವಿನಿ ವೈಷ್ಣವಿ ಅವರು ಆಡಳಿಯದ ಬಗ್ಗೆ ಅಪಾರವಾದ ಜ್ಞಾನ ಹೊಂದಿದ್ದಾರೆ. ಅವರು ಗೋಲ್ಡ್ ಮೆಡಲ್ ಪಡೆದ ವಿದ್ಯಾರ್ಥಿ. ಐಎಎಸ್ ಅಧಿಕಾರಿಯಾಗಿ, ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಆಪ್ತ ಕಾರ್ಯದರ್ಶಿಯಾಗಿ ಕೆಲಸ ಮಾಡಿದವರಾಗಿದ್ದಾರೆ ಎಂದು ಜೋಶಿ ಹೇಳಿದರು.

ಈ ನೆಲದ ಐದು ಜನ ಜ್ಞಾನಪೀಠ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಪಂ.ಭೀಮಸೇನ ಜೋಶಿ, ಡಾ.ಗಂಗೂಬಾಯಿ ಹಾನಗಲ್, ಮಲ್ಲಿಕಾರ್ಜುನ ಮನಸೂರ ಅವರಂತಹ ದಿಗ್ಗಜರು ಹುಟ್ಟಿದ ನಾಡಿದು. ಧಾರವಾಡದ ಈ ರೈಲು ನಿಲ್ದಾಣ ಮದ್ರಾಸ್ ಮರಾಠಾ ರೈಲ್ವೆ ಕೇಂದ್ರವಾಗಿತ್ತು. ಇದೀಗ ಟೆಕ್ನಾಲಜಿಗಳನ್ನು ಬಳಸಿ ಹೈಟೆಕ್ ರೈಲು ನಿಲ್ದಾಣವನ್ನಾಗಿ ಪರಿವರ್ತಿಸಲಾಗಿದೆ ಎಂದರು.

Edited By : Nagesh Gaonkar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

11/10/2022 05:52 pm

Cinque Terre

43.44 K

Cinque Terre

3

ಸಂಬಂಧಿತ ಸುದ್ದಿ