ನವಲಗುಂದ : ಪಾಲಿಸಿದಾರರ ಮತ್ತು ಏಜೆಂಟ್‍ಗಳಿಗೆ ಸಂಬಂಧಿಸಿದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ, ಭಾರತೀಯ ಜೀವವಿಮಾ ಪ್ರತಿನಿಧಿಗಳು ನಗರದ ಎಲ್‍ಐಸಿ ಕಚೇರಿ ಎದುರು ಪದಾಧಿಕಾರಿಗಳು ಹಾಗೂ ಏಜೆಂಟರು ಶುಕ್ರವಾರ ಕೈಗೆ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.
ಈ ವೇಳೆ ಜೀವಾ ವಿಮಾ ಪ್ರತಿನಿಧಿ ಶಿವಯೋಗಿ ಹನಸಿ ಮಾತನಾಡಿ, ತಿಂಗಳಾದ್ಯಂತ ಹೋರಾಟ ಮಾಡುತ್ತ ಬಂದರು ಏನು ಪ್ರಯೋಜನವಾಗಿಲ್ಲ..! ಭಾರತೀಯ ಜೀವವಿಮಾ ನಿಗಮ ಎಂಬ ಬೃಹತ್ ಸಂಸ್ಥೆ ಪ್ರಾರಂಭವಾಗಲಿಕ್ಕೆ ಹಾಗೂ ಆರ್ಥಿಕವಾಗಿ ದೇಶದ ಅಭಿವೃದ್ಧಿಗಾಗಿ ದೇಶದ ಎಲ್ಲ ಜೀವವಿಮಾ ಪ್ರತಿನಿಧಿಗಳೇ ಶ್ರಮ ಪಟ್ಟಿದ್ದೇವೆ. ಎಲ್ ಐ ಸಿ ಯವರೇ ಆಧಾರ ಸ್ತಂಭಗಳು ಎನ್ನುತ್ತಾರೆ. ಆದರೆ ಇಂದು ಎಲ್ ಐ ಸಿ ಮ್ಯಾನೇಜ್ಮೆಂಟ್ ಕಡೆಗಣಿಸುತ್ತಿದೆ, ಸಂಸ್ಥೆ ಇಲ್ಲಿಂದ ನಮ್ಮನ್ನ ಹೊರಹಾಕುವ ಹುನ್ನಾರ ನಡೆಸುತ್ತಿದೆ. ಹಿಂದಿನಿಂದ ನೀಡುತ್ತಿರುವ ಸೌಲಭ್ಯಗಳನ್ನೇ ಕಡಿತಗೊಳಿಸಲಾಗಿದೆ. ಸಂಸ್ಥೆಯ ಮ್ಯಾನೇಜ್ಮೆಂಟ್ ಹಾಗೂ ಐ ಆರ್ ಡಿಗೂ ಸರ್ಕಾರಕ್ಕೆ ವಿನಂತಿಸಿಕೊಳ್ಳುವುದೇನೆಂದರೆ, ನಮ್ಮ ಬೇಡಿಕೆ ಈಡೇರದಿದ್ದರೆ ಅನಿರ್ದಿಷ್ಟಾವಧಿ ಹೋರಾಟ ಮಾಡಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆಯಲ್ಲಿ ಜೀವ ವಿಮಾ ಪಾಲಿಸಿದಾರರ ಮೇಲಿನ ಬೋನಸ್ ದರ ಹೆಚ್ಚಿಸುವ ಹಾಗೂ ಪಾಲಿಸಿದಾರರ ಸಾಲದ ಮೇಲೆ ಬಡ್ಡಿದರ ಮತ್ತು ಜಿಎಸ್‌ಟಿಯನ್ನು ಕಡಿತಗೊಳಿಸಬೇಕೆಂದು ಪ್ರತಿನಿಧಿಗಳಿಂದ ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಆರ್ ಬಿ ಅಳಗವಾಡಿ, ಎಸ್ ಎಸ್ ಅಂಗಡಿ, ಎಸ್ ಜಿ ಕಿಳ್ಳಿಕೆತಾರ, ಬಿ ಎಚ್ ಮೂಗನವರ, ಟಿ ಎಸ್ ಪೂಜಾರ, ಬಿ ಎಮ್. ಗುಜನೂರು, ಎ.ಸಿ ಹಂಜಿ, ಎಸ್ ಜಿ ಹನಸಿ, ಆರ್ ಬಿ ಮಣಕವಾಡ, ಜಿ ಬಿ ಸಾಥಣ್ಣವರ, ಡಿ ಜಿ ಹೆಬಸೂರ, ಆರ್ ಬಿ ಅಕ್ಕಿ, ಜ್ಯೋತಿ ಕಲಾಲ, ಶಶಿಕಲಾ ಸಾಮೋಜಿ, ಆರ್.ಎಫ್ ಬಂಕನೇರಿ ಅನೇಕರು ಉಪಸ್ಥಿತರಿದ್ದರು.
Kshetra Samachara
30/09/2022 06:11 pm