ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮೇಯರ್ ಗೌನ್ ಗದ್ದಲಕ್ಕೆ ಬಲಿಯಾದ ಪಾಲಿಕೆ ಸಾಮಾನ್ಯ ಸಭೆ

ವರದಿ- ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ...

ಹುಬ್ಬಳ್ಳಿ: ಇಂದು ಹುಬ್ಬಳ್ಳಿ ಧಾರವಾಡ ಮಹಾನಗರದ ವಾರ್ಡ್ಗಳ ಸಮಸ್ಯೆ ಮತ್ತು ಕಾಮಗಾರಿ ಕುರಿತು ಚರ್ಚಿಸಲು ಮಹಾನಗರ ಪಾಲಿಕೆ ಸಾಮಾನ್ಯ ಸಭೆ ಆರಂಭವಾಗಿತ್ತು. ಆದ್ರೆ ಗೌನ್ ಗದ್ದಲದಿಂದ ಸಧ್ಯ ಪಾಲಿಕೆ ಸಾಮಾನ್ಯ ಸಭೆ ಬಲಿಯಾಗಿದೆ. ಅಷ್ಟಕ್ಕೂ ಆ ಗೌನ್ ಗದ್ದಲ ಏನ ಅಂತೀರಾ ಈ ಸ್ಟೋರಿ ನೋಡಿ...

ಹೀಗೆ ಸಾಮಾನ್ಯ ಸಭೆಯಲ್ಲಿ ವಿರೋಧ ಪಕ್ಷದ ಕಾಂಗ್ರೆಸ್ ಸದಸ್ಯರು ಮೇಯರ್ ಈರೇಶ ಅಂಚಟಗೇರಿ ಅವರ ವಿರುದ್ಧ ಕೂಗುತ್ತಿರುವುದು ಒಂದು ಕಡೆಯಾದ್ರೆ.ಇನ್ನೊಂದಡೆ ಇನ್ಮುಂದೆ ಯಾವ ಸಾಮಾನ್ಯ ಸಭೆಗೆ ಗೌನ್ ಧರಿಸುವುದಿಲ್ಲ ಎಂದು ಪಣ ತೊಟ್ಟಿರುವ ಮೇಯರ್ ಈರೇಶ ಅಂಚಟಗೇರಿ. ಅಸಲಿ ವಿಷಯ ಏನೆಂದರೆ ಕಳೆದ ನಾಲ್ಕೈದು ದಿನಗಳ ಹಿಂದೆ ಹುಬ್ಬಳ್ಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆಗಮಿಸಿದ್ದರು. ಹು-ಧಾ ಮಹಾನಗರ ಪಾಲಿಕೆ ರಾಷ್ಟ್ರಪತಿ ಮುರ್ಮು ಅವರಿಗೆ ಪೌರ ಸನ್ಮಾನ ಕಾರ್ಯಕ್ರಮ ಕೂಡ ಆಯೋಜಿಸಿದ್ದರು. ಆದ್ರೆ ಮೇಯರ್ ಈರೇಶ ಅಂಚಟಗೇರಿ ಅವರು ಒಂದು ಎಡವಟ್ಟು ಕೂಡ ಮಾಡಿದ್ದಾರೆ. ಅದೆನಪ್ಪಾ ಅಂದ್ರೆ ರಾಷ್ಟ್ರಪತಿ ಪೌರ ಸನ್ಮಾನದಲ್ಲಿ ಮೇಯರ್ ತಮ್ಮ ಗೌನ್ ಇಲ್ಲದೆ ಸನ್ಮಾನ ಮಾಡಿ ರಾಷ್ಟ್ರಪತಿ ಅವರಿಗೆ ಅವಮಾನ ಮಾಡಿದ್ದಾರೆ. ಅಷ್ಟೇ ಅಲ್ಲದೆ ಇಂದು ನಡೆದ ಸಾಮಾನ್ಯ ಸಭೆಯಲ್ಲಿ ಮೇಯರ್ ಗೌನ್ ಧರಿಸದೇ ಬಂದಿದ್ದಾರೆಂದು ಕಾಂಗ್ರೆಸ್ ಪಕ್ಷದ ಸದಸ್ಯರು ಸಭೆಯಲ್ಲೇ ಪ್ರತಿಭಟನೆಗೆ ಮುಂದಾಗಿದ್ದಾರೆ.

ಈರೇಶ ಅಂಚಟಗೇರಿ ಅವರು ಮಹಾಪೌರರ ಸ್ಥಾನಕ್ಕೆ ಅಗೌರವ ತೋರಿಸಿದ್ದಾರೆ. ಆದ್ದರಿಂದ ಗೌನ್ ಧರಿಸುಕೊಂಡು ಬರುವರೆಗೂ ನಡೆಸಲು ಬಿಡುವುದಿಲ್ಲವೆಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಗೌನ್ ವಿಚಾರದ ಬಗ್ಗೆ ಮೇಯರ್ ಈರೇಶ ಅಂಚಟಗೇರಿ ಅವರನ್ನು ಕೇಳಿದ್ರೆ. ಇದು ಬ್ರಿಟಿಷ್ ಕಾಲದ ಪದ್ದತಿ, ನಮಗೆ ಸ್ವಾತಂತ್ರ್ಯ ಸಿಕ್ಕು 75 ವರ್ಷ ಕಳೆದರು ಅವರ ಪದ್ದತಿಯನ್ನು ಯಾಕೆ ಮುಂದುವರೆಸಬೇಕೆಂದು ವಾದ ಮಾಡಿದ್ದಾರೆ. ಅಷ್ಟೇ ಅಲ್ಲದೆ ಗೌನ್ ವಿಚಾರಕ್ಕೆ ಸಿಎಂ ಬೊಮ್ಮಾಯಿ ಅವರು ಕೂಡ ಮೇಯರ್ ಅವರಿಗೆ ಮಾತನಾಡಿದ್ದಾರೆ. ಅದಕ್ಕಾಗಿ ನಾನು ರಾಷ್ಟ್ರಪತಿ ಕಾರ್ಯಕ್ರಮದಲ್ಲೂ ಮತ್ತು ಇನ್ಮುಂದೆ ಸಾಮಾನ್ಯ ಸಭೆಯಲ್ಲೂ ಗೌನ್ ಧರಿಸುವುದಿಲ್ಲವೆಂದು ಹೇಳುತ್ತಾರೆ.

ಒಟ್ನಲ್ಲಿ ಏನೆ ಆಗಲಿ,, ಪ್ರತಿ ತಿಂಗಳು ಸಾಮಾನ್ಯ ಸಭೆ ಮಾಡಿ ಹುಬ್ಬಳ್ಳಿ ಧಾರವಾಡ ಜನರ ಸಮಸ್ಯೆ ಬಗೆ ಹರಿಸುವುದನ್ನು ಬಿಟ್ಟು. ಈ ರೀತಿ ಗೌನ್ ಬಗ್ಗೆ ಮತ್ತು ಸಣ್ಣಪುಟ್ಟ ವಿಚಾರದ ಬಗ್ಗೆ ಸಭೆಯನ್ನೇ ಸ್ಟಾಫ್ ಮುಂದೂಡಿದ್ದು ಎಷ್ಟರ ಮಟ್ಟಿಗೆ ಸರಿ ಹೇಳಿ...

Edited By : Manjunath H D
Kshetra Samachara

Kshetra Samachara

30/09/2022 04:29 pm

Cinque Terre

37.68 K

Cinque Terre

6

ಸಂಬಂಧಿತ ಸುದ್ದಿ