ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಭಯೋತ್ಪಾದನೆಗೆ ಕಾಂಗ್ರೆಸ್ಸೇ ಕಾರಣ; ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ವಾಗ್ದಾಳಿ

ಹುಬ್ಬಳ್ಳಿ: ಗಾಂಧೀಜಿ ಹೇಳಿದ ಮಾತಿನಂತೆ ನಡೆಯಬೇಕಾದ್ರೆ ಮೊದಲು ಕಾಂಗ್ರೆಸ್ ಬ್ಯಾನ್ ಮಾಡಬೇಕು. ದೇಶದಲ್ಲಿ ಭಯೋತ್ಪಾದನೆಗೆ ಕಾಂಗ್ರೆಸ್ಸೇ ಕಾರಣ ಎಂದು ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದರು.

ನಗರದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ನಳಿನ್, ಕೇಂದ್ರೀಯ ತನಿಖಾ ಸಂಸ್ಥೆಗಳು ತನಿಖೆ ಮಾಡಿ ವರದಿ ತಯಾರಿಸಿ, ಧಾರ್ಮಿಕ ಸಂಸ್ಥೆಗಳ ಹೆಸರಲ್ಲಿ ಭಯೋತ್ಪಾದನೆ ಮಾಡ್ತಿದ್ದಾರೆ, ಹೀಗಾಗಿ ಪಿಎಫ್‌ ಐ ಬ್ಯಾನ್ ಮಾಡಲಾಗಿದೆ.

ಈ ವಿಚಾರದಲ್ಲಿ ಕಾಂಗ್ರೆಸ್ ನವರ ನಿಲುವೇನು, ಕಾಂಗ್ರೆಸ್ ನವರು ಭಯೋತ್ಪಾದಕರಿಗೆ ಬೆಂಬಲವಾಗಿ ನಿಂತಿದ್ದಾರಾ? ಕಾಂಗ್ರೆಸ್ ಶಾಸಕರಿಗೇ ಚೂರಿ ಹಾಕಿದ್ರು. ಡಿಜೆ ಹಳ್ಳಿಯಲ್ಲಿ ಬೆಂಕಿ ಹಾಕಿದ್ರೂ ಕಠಿಣ ಕ್ರಮ ಕೈಗೊಂಡಿಲ್ಲ! ದಮ್ ಇದ್ರೆ ಪಿಎಫ್ಐ ನಿಷೇಧ ಮಾಡ್ರಿ ಅಂತಿದ್ರು, ಇವತ್ತು ಮಾಡಿದೆ ಕಣ್ತೆರೆದು ನೋಡಿ ಎಂದರು.

ಸಿದ್ದರಾಮಯ್ಯನವರು ಕೇವಲ ಮತ ಬ್ಯಾಂಕ್ ಗೋಸ್ಕರ ರಾಜಕಾರಣ ಮಾಡ್ತಾರೆ. ತಾಕತ್ತಿದ್ರೆ ಅವರು, ನಮಗೆ ಹಿಂದೂಗಳ ಮತ ಬೇಡ ಎಂದು ಘೋಷಣೆ ಮಾಡಲಿ. ಕಾಂಗ್ರೆಸ್ ನ ಪಪ್ಪು ʼಭಾರತ್ ಜೋಡೊʼಗೆ ಹೊರಟಿದ್ದಾರೆ. ಗುಂಡ್ಲುಪೇಟೆಯಿಂದ ಹೊರಟಿದ್ದಾರೆ, ಆದ್ರೆ ಕೊಡಗು- ಮೈಸೂರಿಂದ ಹೋಗಬೇಕಿತ್ತು.

ಅಲ್ಲಿನ ಜನರು ಟಿಪ್ಪುವಿನ ಮತಾಂಧತೆ, ಕ್ರೌರ್ಯದ ಬಗ್ಗೆ ಹೇಳ್ತಾರೆ. ಟಿಪ್ಪು ಜಯಂತಿ ಆಚರಿಸಿ ಸಮಾಜ ಒಡೆದ ಸಿದ್ದರಾಮಯ್ಯ ಹಾಗೂ ಜೈಲಿಗೆ ಹೋಗಿ ಬಂದ ಡಿಕೆಶಿ ಜೊತೆ ಯಾತ್ರೆ ನಡೆಸ್ತಿದ್ದೀರಾ. ರಾಜ್ಯಕ್ಕೆ ಯಾವ ಸಂದೇಶ ಕೊಡ್ತೀರಾ? ನೀವು ರಾಷ್ಟ್ರ ವಿರೋಧಿಗಳ ಪರವಾಗಿ ನಿಂತಿದ್ದೀರಾ! ಇದಕ್ಕೆಲ್ಲ ಉತ್ತರ ಕೊಟ್ಟು ಕರ್ನಾಟಕದಲ್ಲಿ ಯಾತ್ರೆ ಮಾಡಿ ಎಂದು ʼಭಾರತ್ ಜೋಡೊʼ ಯಾತ್ರೆಗೆ ಟಾಂಗ್‌ ನೀಡಿದರು.

Edited By : Nagesh Gaonkar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

29/09/2022 10:41 pm

Cinque Terre

136.54 K

Cinque Terre

8

ಸಂಬಂಧಿತ ಸುದ್ದಿ