ಹುಬ್ಬಳ್ಳಿ: ಚುನಾವಣೆ ಪ್ರಚಾರ ಗಿಟ್ಟಿಸಿಕೊಳ್ಳುವುದಕ್ಕೆ ಕಾಂಗ್ರೆಸ್ ನವರು "ಪೇ ಮೇಯರ್" ಎಂದು ಪೋಸ್ಟರ್ ಅಂಟಿಸುತ್ತಿದ್ದಾರೆ. ಸತ್ಯಾ ಸತ್ಯತೆ ತಿಳಿಯದೆ ಪೋಸ್ಟ್ ಅಂಟಿಸಿ ಜನರ ದಾರಿ ತಪ್ಪಿಸುತ್ತಿದ್ದಾರೆ. ಪೇ ಮೇಯರ್ ಎಂದು ಪೋಸ್ಟರ್ ಅಂಟಿಸಿದ ಮೂವರು ಕಾಂಗ್ರೆಸ್ ಮುಖಂಡರ ಮೇಲೆ ದೂರು ನೀಡಲಾಗಿದೆ ಎಂದು ಮೇಯರ್ ಈರೇಶ ಅಂಚಟಗೇರಿ ಹೇಳಿದರು.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ "ಪೇ ಸಿಎಂ" ಎಂದು ಪೋಸ್ಟರ್ ಹಾವಳಿ ನಡೆಯುತ್ತಿದೆಯೋ ಅದೇ ರೀತಿ ಧಾರವಾಡ ಜಿಲ್ಲೆಯಾದ್ಯಂತ ಪೇ ಮೇಯರ್ ಎಂದು ಪೋಸ್ಟರ್ ಹಾವಳಿ ನಡೆಯುತ್ತಿದೆ. ಈ ಬಗ್ಗೆ ಕಾಂಗ್ರೆಸ್ ಮುಖಂಡರು ಮೇಯರ್ ಈರೇಶ ಅಂಚಟಗೇರಿ ಅವರ ವಿರುದ್ಧವೂ ನಗರದ ಗೋಡೆ, ಕಸದ ಡಬ್ಬಿ ಮೇಲೆ "ಪೇ ಮೇಯರ್" ಎಂದು ಪೋಸ್ಟರ್ ಅಂಟಿಸಿದ್ದರು.
ಈ ಬಗ್ಗೆ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಮಹಾಪೌರರನ್ನು ಕೇಳಿದ್ರೆ, ರಾಷ್ಟ್ರಪತಿ ಅವರು ಒಬ್ಬರಿಗೆ ಮಾತ್ರ ಸಂಬಂಧವಿಲ್ಲ. ಎಲ್ಲರೂ ಸೇರಿ ಪೌರ ಸನ್ಮಾನ ಕಾರ್ಯಕ್ರಮ ಮಾಡಿದ್ದೇವೆ. ಇದೆಲ್ಲಾ ಪ್ರಚಾರ ಗಿಟ್ಟಿಸಿಕೊಳ್ಳುವುದಕ್ಕೆ ಮಾಡುತ್ತಿರುವುದು. ಈಗಾಗಲೇ ಪೊಲೀಸ್ ಕಮಿಷನರ್ ಗೆ ಈ ಬಗ್ಗೆ ತಿಳಿಸಿದ್ದೇನೆ.
ರಜತ್ ಉಳ್ಳಾಗಡ್ಡಿಮಠ, ದೀಪಕ್ ಚಿಂಚೂರೆ, ಮಂಜುನಾಥ ಡಟ್ಟಿ ಈ ಮೂವರ ವಿರುದ್ಧ ಪೊಲೀಸ್ ಕಮಿಷನರ್ ಗೆ ದೂರು ನೀಡಿದ್ದೇನೆ. ಸದ್ಯ, ಚುನಾವಣೆ ಹತ್ತಿರ ಬಂದಿದೆ. ಅದಕ್ಕಾಗಿ ಪ್ರಚಾರ ಗಿಟ್ಟಿಸಿಕೊಳ್ಳುವುದಕ್ಕೆ ಇಷ್ಟೆಲ್ಲಾ ನಾಟಕ ಮಾಡುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
28/09/2022 04:03 pm