ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಬೆಳೆ ಹಾನಿಯಾದ ರೈತರಿಗೆ ಕೂಡಲೇ ಪರಿಹಾರ ನೀಡಿ ಸಂತೋಷ ಲಾಡ್ ಮನವಿ

ಕಲಘಟಗಿ: ಕಲಘಟಗಿ ಹಾಗೂ ಅಳ್ನಾವರ ಭಾಗದಲ್ಲಿ ಅತಿಯಾದ ಮಳೆಯಿಂದಾಗಿ ರೈತರ ಬೆಳೆಗಳು ಬಹಳಷ್ಟು ಹಾನಿಯಾಗಿದ್ದು ಅದೇ ರೀತಿ ಮನೆಗಳು ಕೂಡ ಬಿದ್ದಿವೆ. ಅಧಿಕಾರಿಗಳು ವಿಳಂಬಮಾಡದೆ ಸರಿಯಾದ ರೀತಿಯಲ್ಲಿ ಸಮೀಕ್ಷೆ ಮಾಡಿ ರೈತರಿಗೆ ಬೆಳೆ ಪರಿಹಾರ ನೀಡಬೇಕು ಎಂದು ಇಂದು ತಮ್ಮ ಅಮೃತ ನಿವಾಸದಲ್ಲಿ ಸಂತೋಷ ಲಾಡ್ ರವರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

ತಾಲೂಕಿನಲ್ಲಿ ಹಲವಾರು ರಸ್ತೆಗಳು ಹದಗೆಟ್ಟು ಹೋಗಿದ್ದು ಅದರಲ್ಲೂ ಮುಖ್ಯವಾಗಿ ಕಲಘಟಗಿ ಧಾರವಾಡ ರಸ್ತೆ ಸಂಪೂರ್ಣ ಹಾಳಾಗಿದ್ದು ಒಂದೂವರೆ ವರ್ಷದಿಂದ ರಸ್ತೆ ನಿರ್ಮಾಣ ಮಾಡಲಾಗುತ್ತದೆ ಎಂದು ಹೇಳುತ್ತಾ ಬಂದಿದ್ದು ಸರಕಾರ ಕೂಡಲೆ ಇಂತಹ ರಸ್ತೆಗಳನ್ನು ಸರಿಪಡಿಸಬೇಕು ಎಂದು ಮನವಿ ಮಾಡಿದರು.

Edited By : Nagesh Gaonkar
Kshetra Samachara

Kshetra Samachara

24/09/2022 10:22 pm

Cinque Terre

124.38 K

Cinque Terre

3

ಸಂಬಂಧಿತ ಸುದ್ದಿ