ಹುಬ್ಬಳ್ಳಿ: ಎಸ್‌ಡಿಪಿಐ ಹಾಗೂ ಪಿಎಫ್ಐ ಕಚೇರಿಗಳ ಮೇಲೆ ಎನ್‌ಐಎಎ ದಾಳಿ ಹಿನ್ನಲೆಯಲ್ಲಿ ಎಸ್‌ಡಿಪಿಐ ಸಂಘಟನೆಗಳಿಂದ ಹುಬ್ಬಳ್ಳಿಯಲ್ಲಿ ಸಭೆ ನಡೆಸಿರುವ ಮಾಹಿತಿ ಪಬ್ಲಿಕ್ ನೆಕ್ಸ್ಟ್ ಮಾಧ್ಯಮಕ್ಕೆ ಲಭ್ಯವಾಗಿದೆ.
ಹುಬ್ಬಳ್ಳಿಯ ಹಳೇ ಹುಬ್ಬಳ್ಳಿಯ ಗುಡಿಹಾಳ ರಸ್ತೆಯಲ್ಲಿರುವ ನಿಹಾಲ್ ಫಂಕ್ಷನ್ ಹಾಲ್‌ನಲ್ಲಿ ಕಾರ್ಯಕರ್ತರ ಸಭೆ ನಡೆಸಿದ್ದು, ಸಭೆಯಲ್ಲಿ ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಭಾಗಿಯಾಗಿದ್ದರು.
ಸಭೆಯಲ್ಲಿ ಕೇಂದ್ರ ಸರ್ಕಾರದ ನಡೆ ಖಂಡಿಸಿದ ಅಬ್ದುಲ್ ಮಜೀದ್, ವಿರೋಧ ಪಕ್ಷಗಳೂ ನಮಗೆ ಬೆಂಬಲವಾಗಿಲ್ಲ ಎಂದ ಅಬ್ದುಲ್, ಉತ್ತರ ಕರ್ನಾಟಕದಲ್ಲಿ ಎಸ್‌ಡಿಪಿಐ ಸಂಘಟಿಸಲು ಕರೆ ನೀಡಿದರು. ಮುಸ್ಲಿಂರನ್ನು ಎಲ್ಲಾ ಪಕ್ಷಗಳು ಮತಗಳ ಯಂತ್ರಗಳನ್ನಾಗಿ ಮಾಡಿಕೊಂಡಿವೆ. ನಮ್ಮದೇ ಸಂಘಟನೆಯಿಂದ ಉಳಿದ ಪಕ್ಷಗಳಿಗೆ ಬುದ್ಧಿ ಕಲಿಸೋಣ ಎಂದ ಅಬ್ದುಲ್, ಹುಬ್ಬಳ್ಳಿಯಲ್ಲಿ ನಡೆದ ಸಭೆಯಲ್ಲಿ ಕಾರ್ಯಕರ್ತರಿಗೆ ಎಸ್‌ಡಿಪಿಐ ಸಂಘಟಿಸುವಂತೆ ಕರೆ ನೀಡಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
22/09/2022 01:00 pm