ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : ಸಂವಿಧಾನ ನಮ್ಮದಲ್ಲ ಎಂದು ಆರ್ ಎಸ್ ಎಸ್ 1950ರಲ್ಲೇ ಹೇಳಿತ್ತು : ಪ್ರಕಾಶ ಅಂಬೇಡ್ಕರ್

ಧಾರವಾಡ : 1950 ರಲ್ಲಿ ಆರ್ ಎಸ್ ಎಸ್ ಈ ಸಂವಿಧಾನ ನಮ್ಮದಲ್ಲ ಎಂದು ಹೇಳಿತ್ತು. ನಮಗೆ ಯಾವಾಗ ಅವಕಾಶ ಸಿಗುತ್ತೋ, ಆ ದಿನ ಅದನ್ನ ನಾವು ಬದಲಾವಣೆ ಮಾಡ್ತೆವೆ ಎಂದಿದ್ದಾರೆ. ಇವರ ಉದ್ದೇಶನೇ ಸಂವಿಧಾನ ಬದಲಿಸಬೇಕು ಎಂದಿದೆ ಎಂದು ಧಾರವಾಡದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಮೊಮ್ಮಗ ಪ್ರಕಾಶ ಅಂಬೇಡ್ಕರ್ ಹೇಳಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಲ್ಲಿವರೆಗೆ ಇವರು ದೇಶದ ಅರ್ಧ ರಾಜ್ಯಗಳಲ್ಲಿ ಅಧಿಕಾರಕ್ಕೆ ಬರಲ್ಲ, ಲೋಕಸಭೆ ಎಲ್ಲಿವರೆಗೆ ಗೆಲ್ಲಲ್ಲ, ಅಲ್ಲಿವರೆಗೆ ಅವರು ಈ ಮಾತನ್ನ ಆಡಿಲ್ಲ. ಬಿಜೆಪಿ ಎಲ್ಲ ರಾಜ್ಯಗಳಲ್ಲಿ ರಾಜಕೀಯ ಸಂಘಟನೆ ಅಳಿಸಲು ಮುಂದಾಗಿದೆ. ತಮ್ಮ ಅಧಿಕಾರಕ್ಕಾಗಿ ಈ ರೀತಿ ಮಾಡುತ್ತಿದೆ. ಆರ್ ಎಸ್ ಎಸ್ ಹಾಗೂ ಬಿಜೆಪಿ ಟೆಬಲ್ ಮೇಲೆ ಸಂವಿಧಾನ ಬದಲಾವಣೆಯ ಅಜೆಂಡಾ ಇದೆ. ಪರಿವಾರದ ಸಂರಕ್ಷಣೆ, ಸಾಮಾಜಿಕ ಸಂರಕ್ಷಣೆ ಅಲ್ಲ ಅದಕ್ಕಾಗಿ ಜನರು ಶಿಕ್ಷಣ ಕೊಡಿಸುವುದು ಮಾತ್ರ ಅವಶ್ಯಕತೆ ಇಲ್ಲ ಎಂದರು.

ಮೀಸಲಾತಿನೇ ಇರದೇ ಇದ್ರೆ ನಿಮ್ಮ ಮಕ್ಕಳು ಶಿಕ್ಷಣ ಪಡೆಯಲು ಆಗಲ್ಲ, ನೌಕರಿ ಕೂಡಾ ಸಿಗಲ್ಲ. ಯಾರು ತಮ್ಮ ಪರಿವಾರದ ವಿಚಾರ ಮಾಡುತಿದ್ದಾರೆ, ಅವರಿಗೆ ಸಾಮಾಜಿಕ ಜವಾಬ್ದಾರಿ ಕೂಡಾ ಇದೆ. ಸಾಮಾಜಿಕ ಜವಾಬ್ದಾರಿ ಮಾಡಬೇಕಾದ್ರೆ ಸಂವಿಧಾನ ಉಳಿಸಬೇಕು. ಸಂವಿಧಾನ ಉಳಿಸಲು ಸಾಮಾಜಿಕ ಹೋರಾಟ ಅವಶ್ಯಕತೆ ಇದೆ. ತಮ್ಮ ಜವಾಬ್ದಾರಿ ಮರೆತವನು ತಮ್ಮ ಮಕ್ಕಳನ್ನ ಬಂಧನದಲ್ಲಿ ಇಡುವಂತೆ ಆಗಲಿದೆ.

Edited By : Nagesh Gaonkar
Kshetra Samachara

Kshetra Samachara

19/09/2022 05:08 pm

Cinque Terre

40.2 K

Cinque Terre

14

ಸಂಬಂಧಿತ ಸುದ್ದಿ