ಕುಂದಗೋಳ : ಮತಕ್ಷೇತ್ರದ ರಾಜ್ಯ ರಾಜಕೀಯ ರಂಗಕ್ಕೆ ಪ್ರವೇಶ ಪಡೆಯಲು ಕ್ಷೇತ್ರದ ಚುಕ್ಕಾಣಿ ಹಿಡಿಯಲು ಎಲ್ಲೇಡೆ ನಾಯಕರ ತಾಲೀಮು ಜೋರಾಗಿದೆ.
ಈಗಾಗಲೇ ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಪಕ್ಷೇತರರು ಸೇರಿದಂತೆ ಪ್ರಜಾಕೀಯ, ಆಮ್ ಆದ್ಮಿ ಹಾಗೂ ಇತರೆ ಪಕ್ಷಗಳು ಸಹ ಮುಂಚೂಣಿಯಲ್ಲಿದ್ದು ಆಕಾಂಕ್ಷಿಗಳು ಟಿಕೆಟ್'ಗಾಗಿ ಸಿದ್ಧತೆ ನಡೆಸಿದ್ದಾರೆ.
ಸದ್ಯ ರಾಜಕೀಯ ರಂಗದಲ್ಲಿ ತಾವೋಬ್ಬರಾಗಿ ಗುರುತಿಸಿಕೊಂಡಿರುವ ಕಾಂಗ್ರೆಸ್ ಮುಖಂಡ ರಮೇಶ್ ಕೊಪ್ಪದ ಕ್ಷೇತ್ರದ ಅಭಿವೃದ್ಧಿಗೆ ಏನೇನೆಲ್ಲಾ ಕೆಲಸ ಮಾಡಿದ್ದಾರೆ ?
ಅವರಿಗೆ ಯಾಕೆ ಟಿಕೆಟ್ ಕೊಡಬೇಕು ? ಟಿಕೆಟ್ ಸಿಗದಿದ್ದರೆ ಅವರ ಮುಂದಿನ ನಡೆ ಏನು ? ಕ್ಷೇತ್ರದ ಹಾಲಿ ಶಾಸಕರಿಗೆ ಟಿಕೆಟ್ ಆದ್ರೇ ಅವರ ಕಾರ್ಯವೈಖರಿ ಏನು ? ಟಿಕೆಟ್ ಸಿಗಲು ಅವರಲ್ಲಿ ಇರುವ ಅರ್ಹತೆ ಯಾವುವು ? ಹೀಗೆ ಹತ್ತು ಹಲವಾರು ಪ್ರಶ್ನೆಗಳಿಗೆ ಪಬ್ಲಿಕ್ ನೆಕ್ಸ್ಟ್ ಯಾರಿವರು ? ಕಾರ್ಯಕ್ರಮದ ಮೂಲಕ ಪ್ರಜಾಪ್ರಭುತ್ವದ ಮುಖ್ಯ ಅಂಗ ಮತದಾರರಿಗೆ ತಿಳಿಸಲಾಗಿದೆ.
ಪ್ರಬಲ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಕಾಂಗ್ರೆಸ್ ಮುಖಂಡ ರಮೇಶ್ ಕೊಪ್ಪದ ಅವರ ಚುನಾವಣೆ ತುತ್ರಗಾರಿಕೆ ಕುರಿತು ಮಾಹಿತಿ ನಿಮ್ಮ ಪಬ್ಲಿಕ್ ನೆಕ್ಸ್ಟ್ ವಿಶೇಷ ಸಂದರ್ಶನ ನೀವೆ ನೋಡಿ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
19/09/2022 02:02 pm