ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ನಾನು 65 ವರ್ಷ ದಾಟಲ್ಲ ಎಂದಿದ್ದ ಸಚಿವ ಉಮೇಶ ಕತ್ತಿ; ನೆನೆದು ಭಾವುಕರಾದ ಜೋಶಿ

ಹುಬ್ಬಳ್ಳಿ: ಉಮೇಶ ಕತ್ತಿ ಅವರು ನನಗೆ ಪರಮಾಪ್ತ ಸ್ನೇಹಿತರು, ಕಳೆದ 25 ವರ್ಷಗಳಿಂದ ಒಡನಾಟ ಹೊಂದಿದ್ದೆವು. ನಾನು ಬಿಜೆಪಿ ರಾಜ್ಯಾಧ್ಯಕ್ಷ ಆದ ಸಂದರ್ಭದಲ್ಲಿ ಬಹಳಷ್ಟು ಸಹಕಾರ ಕೊಟ್ಟಿದ್ದರು. ಅವರು ನೇರ ನಿಷ್ಠ ಸ್ವಭಾವದ ವ್ಯಕ್ತಿ. ಅವರ ಅಗಲಿಕೆ ವೈಯಕ್ತಿಕವಾಗಿ ಅತೀವ ದುಃಖ ತಂದಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಚಿವ ಉಮೇಶ ಕತ್ತಿ ನಿಧನಕ್ಕೆ ಸಂತಾಪ ಸೂಚಿಸಿದರು.

ನಗರದಲ್ಲಿಂದು ಮಾತನಾಡಿದ ಅವರು, ಉಮೇಶ ಕತ್ತಿ ಅವರು ಯಾವತ್ತೂ ಒಳಗೊಂದು ಹೊರಗೊಂದು ಮಾಡಿಲ್ಲ. ಅವರಿಗೆ ಅನಿಸಿದನ್ನು ಹೇಳಿ ಬಿಡುತ್ತಿದ್ದರು. ಆ ಮೇಲೆ ಎಲ್ಲರೊಂದಿಗೆ ಸ್ನೇಹದೊಂದಿಗೆ ಇರುತ್ತಿದ್ದರು. ಅವರ ಹೇಳಿಕೆಗಳು ಕೆಲವೊಮ್ಮೆ ವಿವಾದ ಎಂದು ಅನಿಸಿದ್ರು ಅವರಿಗೆ ಉತ್ತರ ಕರ್ನಾಟಕದ ಬಗ್ಗೆ ಇರುವ ಕಳಕಳಿ ಅಲ್ಲಗಳೆಯುವಂತಿಲ್ಲ. ಉತ್ತರ ಕರ್ನಾಟಕ ಅಭಿವೃದ್ಧಿ ಆಗಬೇಕು ಎಂದು ಹೇಳುತ್ತಿದ್ದರು.

ಅಲ್ಲದೇ ನಗು ನಗುತ್ತಾನೇ ನಾನು 65 ವರ್ಷ ದಾಟುವುದಿಲ್ಲ. ನಮ್ಮ ಮನೆಯಲ್ಲಿ ಎಲ್ಲರೂ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆಂದು ಹೇಳುತ್ತಿದ್ದರು. ಅದಕ್ಕೆ ನಾನು ಹಾಗೇ ಮಾತಾಡಬೇಡಿ ಎಂದು ಹೇಳುತ್ತಿದ್ದೆ. ಅಲ್ಲದೇ ಆರೋಗ್ಯದ ಬಗ್ಗೆ ಕಾಳಜಿ ತಗೋರಿ ಎಂದು ಎರಡು ಬಾರಿ ಹೇಳಿದ್ದೆ. ಆದರೆ ದುರ್ದೈವ ಇದೀಗ ಅವರು ನಮ್ಮೊಂದಿಗೆ ಇಲ್ಲ. ಅವರ ಅಗಲಿಕೆ ನೋವನ್ನು ಅವರ ಕುಟುಂಬಕ್ಕೆ ತಡೆಯಲು ಶಕ್ತಿ ನೀಡಲಿ ಎಂದು ಸಂತಾಪ ಸೂಚಿಸಿದರು.

Edited By : Shivu K
Kshetra Samachara

Kshetra Samachara

09/09/2022 11:03 am

Cinque Terre

31.89 K

Cinque Terre

0

ಸಂಬಂಧಿತ ಸುದ್ದಿ