ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ಪರಿಹಾರ ನೀಡದಿದ್ದರೆ ಹೋರಾಟ; ಕೋನರೆಡ್ಡಿ

ಅಣ್ಣಿಗೇರಿ: ತಾಲೂಕಿನಲ್ಲಿ ಸುರಿದ ಭಾರಿ ಮಳೆಗೆ ಅತಿವೃಷ್ಟಿ ಉಂಟಾಗಿ ರೈತ ಬೆಳೆದ ಬೆಳೆಗಳ ಸಂಪೂರ್ಣ ನೆಲಕಚ್ಚಿದೆ ಹೋಗಿ ಹಾಗೂ ಸಾರ್ವಜನಿಕರ ಮನೆಗಳು ಬಿದ್ದು ಜನ ಜೀವನ ಅಸ್ತವ್ಯಸ್ತವಾಗಿದ್ದರೂ ಸರಕಾರ ಇತ್ತ ಗಮನ ಹರಿಸುತ್ತಿಲ್ಲ ಪರಿಹಾರವನ್ನು ನೀಡುತ್ತಿಲ್ಲ ಎಂದು ಕಾಂಗ್ರೆಸ್ ಮುಖಂಡ ಎನ್ ಹೆಚ್ ಕೋನರೆಡ್ಡಿ ಅವರು ಆರೋಪಿಸಿ ಪಟ್ಟಣದ 21ನೇ ವಾರ್ಡಿನಲ್ಲಿ ಗ್ರಾಮವಾಸ್ತವ್ಯ ಮಾಡಿದರು.

ಈ ವೇಳೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಕೋನರೆಡ್ಡಿ ಅವರು ಸರ್ಕಾರ ಪರಿಹಾರ ನೀಡುವಲ್ಲಿ ವಿಳಂಬ ಮಾಡುತ್ತಿದೆ. ನಿರಾಶ್ರಿತರಿಗೆ ಆದಷ್ಟು ಬೇಗನೆ ಪರಿಹಾರ ನೀಡಬೇಕು. ಇನ್ನೂ ತಾಲೂಕಿನಾದ್ಯಂತ ಗ್ರಾಮ ವಾಸ್ತವ್ಯ ಮಾಡಿ ಜನರಿಗೆ ಸಿಗಬೇಕಾದ ಪರಿಹಾರವನ್ನು ಕೊಡಿಸುವಲ್ಲಿ ಹೋರಾಟ ಮಾಡುತ್ತೇನೆ ಎಂದು ಹೇಳಿದರು.

21 ನೇ ವಾರ್ಡಿನ ಸಿರಿಯಮ್ಮನವರ ಮನೆಯಲ್ಲಿ ಕೋನರೆಡ್ಡಿ ಗ್ರಾಮ ವಾಸ್ತವ್ಯ ಮಾಡಿ,ಮುಂಜಾನೆ ಪಟ್ಟಣದ ವಿವಿಧ ಓಣಿಗಳಿಗೆ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಮನವಿ ಪತ್ರಗಳನ್ನು ಸ್ವೀಕರಿಸಿದರು.

Edited By : Shivu K
Kshetra Samachara

Kshetra Samachara

08/09/2022 01:05 pm

Cinque Terre

23.06 K

Cinque Terre

0

ಸಂಬಂಧಿತ ಸುದ್ದಿ