ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮುರಘಾ ಶ್ರೀ ಲೈಂಗಿಕ ದೌರ್ಜನ್ಯ ಪ್ರಕರಣ; ಸಮಗ್ರ ತನಿಖೆಗೆ ಒತ್ತಾಯ

ಹುಬ್ಬಳ್ಳಿ: ಚಿತ್ರದುರ್ಗದ ಮುರುಘಾ ಮಠಾಧಿಪತಿಗಳಾದ ಶಿವಮೂರ್ತಿ ಶ್ರೀಗಳು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸತ್ಯಾಸತ್ಯತೆಯನ್ನು ಬಯಲು ಮಾಡುವ ಮೂಲಕ ಸರ್ಕಾರ ಸಮಗ್ರ ತನಿಖೆ ಮಾಡಲು ಕರ್ನಾಟಕ ದಲಿತ ಸಂಘರ್ಷ ಸಮಿತಿ ಒತ್ತಾಯಿಸುತ್ತದೆ. ಎಂದು ರಾಜ್ಯ ಸಂಚಾಲಕರಾದ ಮರೀಶ್ ನಾಗಣ್ಣವರ ಹೇಳಿದರು.

ಅಪ್ರಾಪ್ತೆಗೆ ಸೂಕ್ತ ರಕ್ಷಣೆ ನೀಡಬೇಕು ಎಂದ ಅವರು ಇಂತಹ ಘಟನೆಗಳು ಮತ್ತೆ ಮರುಕಳಿಸಬಾರದು ಎಂದು ಹೇಳಿದರು. ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮುರಘಾ ಶ್ರೀ ಅವರನ್ನು ತಡವಾಗಿ ಬಂಧನ ಮಾಡಿರುವುದು ವಿಳಂಬ ಧೋರಣೆ ಎದ್ದು ಕಾಣುತ್ತಿದೆ. ಸ್ವಾಮೀಜಿಗಳ ಮೇಲೆ ಇರುವ ಆರೋಪ ಮುಕ್ತವಾಗಿರುವ ವರೆಗೂ ಸ್ವಾಮೀಜಿ ತಮ್ಮ ಸ್ಥಾನವನ್ನು ಬಿಟ್ಟು ಕೊಡಬೇಕು ಎಂದ ಅವರು ಒತ್ತಾಯಿಸಿದರು.

ಶ್ರೀಗಳ ಬೆಂಬಲಿಗರು ಸಾಕ್ಷಿಗಳನ್ನು ನಾಶ ಮಾಡಲು ಯತ್ನಸುತ್ತಿದ್ದಾರೆ. ಅಂತವರ ಬಗ್ಗೆ ಸರ್ಕಾರ ಗಮನಹರಿಸಬೇಕು ಎಂದರು. ದೌರ್ಜನ್ಯಕ್ಕೆ ಒಳಗಾದ ಅಪ್ರಾಪ್ತೆ ದಲಿತರೆಂದು ತಿಳಿದುಬಂದಿದ್ದು, ಆರೋಪಿಯ ಮೇಲೆ ಪೋಕ್ಸೋ ಕಾನೂನು ಹಾಗೂ ಎಸ್.ಸಿ, ಎಸ್. ಟಿ ದೌರ್ಜನ್ಯ ತಡೆಯ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

Edited By : Nagesh Gaonkar
Kshetra Samachara

Kshetra Samachara

03/09/2022 05:33 pm

Cinque Terre

32.11 K

Cinque Terre

1

ಸಂಬಂಧಿತ ಸುದ್ದಿ