ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಹುಬ್ಬಳ್ಳಿಯ ಚೆನ್ನಮ್ಮ ಮೈದಾನ: ಹೈಕೋರ್ಟ್‌ಗೆ ಧನ್ಯವಾದ ಸಲ್ಲಿಸಿದ ಮುತಾಲಿಕ್

ಧಾರವಾಡ: ಹುಬ್ಬಳ್ಳಿಯ ಚೆನ್ನಮ್ಮ ಮೈದಾನಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮಧ್ಯಂತರ ಆದೇಶ ಮಾಡಿತ್ತು. ಈ ಮೈದಾನಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಹಾಗೂ ಪಾಲಿಕೆ ಆಯುಕ್ತರು ನಿರ್ಣಯ ಕೈಗೊಳ್ಳಬಹುದು ಎಂದು ಹೈಕೋರ್ಟ್ ಹೇಳಿದೆ. ಸದ್ಯ ಈ ಮೈದಾನದಲ್ಲಿ ಶೇ.99 ರಷ್ಟು ಗಣೇಶೋತ್ಸವ ಆಚರಿಸುವ ಆಶಾ ಮನೋಭಾವನೆ ಮೂಡಿದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಹೇಳಿದ್ದಾರೆ.

ಧಾರವಾಡದಲ್ಲಿ ಮಾತನಾಡಿರುವ ಅವರು, ಚಾಮರಾಜ್ ಪೇಟೆಯ ಮೈದಾನಕ್ಕೂ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಅಲ್ಲಿನ ತೀರ್ಮಾನ ಹೊರ ಬಂದ ನಂತರ ಅಪೀಲ್ ಹೋಗಬಹುದು ಹೈಕೋರ್ಟ್ ಹೇಳಿದೆ. ನ್ಯಾಯ ಕೊಟ್ಟಿದ್ದಕ್ಕೆ ನಾನು ಹೈಕೋರ್ಟ್‌ಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದಿದ್ದಾರೆ.

ಈ ಹಿಂದೆಯೇ ಚೆನ್ನಮ್ಮ ಮೈದಾನದಲ್ಲಿ ಎರಡೇ ಸಲ ನಮಾಜ್ ಮಾಡಬಹುದು ಎಂದು ಹೈಕೋರ್ಟ್ ಹೇಳಿದೆ. ಅಂಜುಮನ್ ಇಸ್ಲಾಂನವರು ಇದಕ್ಕೆ ಮಾಲೀಕರು ಅಲ್ಲ, ಸಂಬಂಧಿಕರೂ ಅಲ್ಲ. ಪಾಲಿಕೆ ಅದರ ಮಾಲೀಕ. ಗಣೇಶ ಹಬ್ಬ ಮಾಡಿದರೆ ಸೌಹಾರ್ಧತೆ ಆಗುತ್ತದೆ. ಆದರೆ, ಅಂಜುಮನ್ ಇಸ್ಲಾಂ ಹೈಕೋರ್ಟ್‌ಗೆ ಅಪೀಲ್ ಹೋಗಿದೆ. ಈ ಮೂಲಕ ಭೂಮಿ ಕಬಳಿಸುವ ಯತ್ನ ಮಾಡಲಾಗುತ್ತಿದೆ. ಇವರಿಗೆ ಸೌಹಾರ್ಧತೆ ಬೇಡವಾಗಿದೆ. ಇವರಿಗೆ ಸಂವಿಧಾನದ ಆದೇಶ ಬೇಡವಾಗಿದೆ. ಮುಸ್ಲಿಂರಿಗೆ ಗಲಾಟೆ, ಗಲಭೆ ಮುಖ್ಯವಾಗಿದೆ. ಅಲ್ಲಿ ನಾಳೆ ನೂರಕ್ಕೆ ನೂರು ಗಣೇಶ ಹಬ್ಬ ಆಚರಣೆ ಮಾಡುತ್ತೇವೆ ಎಂದಿದ್ದಾರೆ.

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

30/08/2022 09:19 pm

Cinque Terre

78.92 K

Cinque Terre

60

ಸಂಬಂಧಿತ ಸುದ್ದಿ