ಧಾರವಾಡ: ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಧಾರವಾಡದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಬೃಹತ್ ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಧಾರವಾಡದ ಕೆಸಿಸಿ ಬ್ಯಾಂಕ್ ವೃತ್ತದಿಂದ ಈ ಸ್ವಾತಂತ್ರ್ಯ ನಡಿಗೆಗೆ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ಮುರುಘಾಮಠದ ಡಾ.ಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಮಲ್ಲಯ್ಯ ಹಿರೇಮಠ ಅವರು ಚಾಲನೆ ನೀಡಿದರು.
ಕೆಸಿಸಿ ಬ್ಯಾಂಕ್ ವೃತ್ತದಿಂದ ಆರಂಭಗೊಂಡ ಮೆರವಣಿಗೆ ಸುಭಾಷ ರಸ್ತೆ, ವಿವೇಕಾನಂದ ವೃತ್ತ, ಟಿಕಾರೆ ರಸ್ತೆ, ಲೈನ್ ಬಜಾರ್, ಸಂಗಮ ಸರ್ಕಲ್, ಎನ್‌ಟಿಟಿಎಫ್, ಟೋಲನಾಕಾ, ಗಾಂಧಿನಗರ ವೃತ್ತ, ನವಲೂರು ರಸ್ತೆ ಮೂಲಕ ಸತ್ತೂವರೆಗೂ ಸಾಗಿತು.
ರಾಣಿ ಚೆನ್ನಮ್ಮ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗರಾಜ ಗೌರಿ, ಶಾಸಕ ಪ್ರಸಾದ ಅಬ್ಬಯ್ಯ, ಎಐಸಿಸಿ ಸದಸ್ಯ ದೀಪಕ ಚಿಂಚೋರೆ, ಬಸವರಾಜ ಗುರಿಕಾರ, ದೀಪಾ ಗೌರಿ, ಆರ್.ಕೆ.ಪಾಟೀಲ, ಪಿ.ಎಚ್.ನೀರಲಕೇರಿ, ಮಯೂರ ಮೋರೆ ಸೇರಿದಂತೆ ಅನೇಕರ ನೇತೃತ್ವದಲ್ಲಿ ಈ ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ನಡಿಗೆಯಲ್ಲಿ ಸುಮಾರು 6 ರಿಂದ 7 ಸಾವಿರ ಜನ ಪಾಲ್ಗೊಂಡು ಕೈಯಲ್ಲಿ ರಾಷ್ಟ್ರಧ್ವಜ ಹಿಡಿದು ಸಾಗಿದ್ದು ಎಲ್ಲರ ಗಮನಸೆಳೆಯಿತು. ಅಲ್ಲದೇ ನಡಿಗೆಯುದ್ದಕ್ಕೂ ಭಾರತ ಮಾತೆಯ ಪರ ಘೋಷಣೆಗಳು ಮೊಳಗಿದವು.
Kshetra Samachara
29/08/2022 05:27 pm