ಕುಂದಗೋಳ : ಸಿದ್ದರಾಮಯ್ಯ ಹಿರಿಯ ನಾಯಕರು ಅವರ ಮೇಲೆ ಮೊಟ್ಟೆ ಎಸೆದ ಕ್ರಮ ಸರಿಯಲ್ಲಾ. ಇದೇ ಬಿಜೆಪಿ ಸರ್ಕಾರ ಅವರದೇ ಆಡಳಿತದಲ್ಲಿ ಎಷ್ಟು ತಪ್ಪು ಮಾಡಿದೆ ಎಂಬುದು ಜನರಿಗೆ ಗೊತ್ತಿದೆ ಎಂದು ಶಾಸಕಿ ಕುಸುಮಾವತಿ ಶಿವಳ್ಳಿ ಹೇಳಿದರು.
ಅವರು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆದ ಕ್ರಮ ಖಂಡಿಸಿ ಹಮ್ಮಿಕೊಂಡಿದ್ದ ಪ್ರತಿಭಟನಾ ಪಾದಯಾತ್ರೆ ಬಳಿಕ ಪಬ್ಲಿಕ್ ನೆಕ್ಸ್ಟ್ ಜೊತೆ ಮಾತನಾಡಿ ದಾವಣಗೆರೆ ಸಮಾವೇಶ ನೋಡಿ ಬಿಜೆಪಿ ಹೊಟ್ಟೆ ಉರಿದಿದೆ. ಎಲ್ಲಿ ಮರಳಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತೇ ಎಂಬ ಭಯ ಶುರುವಾಗಿದೆ ಎಂದರು. ಹಿರಿಯ ನಾಗರೀಕರಿಗೆ ಗೌರವ ಕೊಡುವುದನ್ನು ಬಿಜೆಪಿ ಕಲಿಯಬೇಕಿದೆ ಎಂದರು.
Kshetra Samachara
23/08/2022 02:49 pm